ಫೆ.5ರಂದು ಡಿವೈಎಫ್‌ಐ ಧರಣಿ ಸತ್ಯಾಗ್ರಹ
ಕುಂದಾಪುರ, ಫೆ.4: ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಾಸ್ತ್ರಿ ಸರ್ಕಲ್ ನಿಂದ ವಿನಾಯಕ ಥಿಯೇಟರ್ ಮಧ್ಯೆ ಇರುವ ಎರಡೂ ಅಂಡರ್‌ಪಾಸ್‌ನ್ನು ತೆರವುಗೊಳಿಸಲು ಮತ್ತು ಕೆಇಬಿ ಎದುರುಗಡೆ ಸ್ಥಳೀಯರಿಗೆ ಮತ್ತು ವಾಹನ ಚಾಲಕರಿಗೆ ಪಥ ಬದಲಾಯಿಲು ಅವಕಾಶ ಮಾಡಿಕೊಡಲು ಒತ್ತಾಯಿಸಿ ಡಿವೈಎಫ್ಐ ತಾಲೂಕು ಸಮಿತಿ ನೇತೃತ್ವದಲ್ಲಿ ಫೆ.5ರಂದು 10ಗಂಟೆಗೆ ಕುಂದಾ ಪುರ ಶಾಸ್ತ್ರಿ ವೃತ್ತದ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಡಿವೈಎಫ್‌ಐ ತಾಲೂಕು ಸಮಿತಿ ಅಧ್ಯಕ್ಷ ರಾಜೇಶ ವಡೇರಹೊಬಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





