ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಭೀಕರವಾಗಿ ಕೊಲೆಗೀಡಾದಾಗ ಭಾರತ ದುಃಖ ವ್ಯಕ್ತಪಡಿಸಿತ್ತು: ಇರ್ಫಾನ್ ಪಠಾಣ್
'ಆಂತರಿಕ' ವಿಷಯದಲ್ಲಿ ವಿದೇಶಿಗರ ಹಸ್ತಕ್ಷೇಪ ಕುರಿತು ಟ್ವೀಟ್ ಮಾಡಿದ ಕ್ರಿಕೆಟಿಗ

ಹೊಸದಿಲ್ಲಿ: ದಿಲ್ಲಿಯ ಗಡಿಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಹಲವಾರು ಅಂತಾರಾಷ್ಟ್ರೀಯ ತಾರೆಗಳು ಬೆಂಬಲ ವ್ಯಕ್ತಪಡಿಸಿದ್ದರು. ಬಳಿಕ ಭಾರತೀಯ ವಿದೇಶಾಂಗ ಸಚಿವಾಲಯವು 'ಆಂತರಿಕ ವಿಷಯದಲ್ಲಿ ವಿದೇಶಿಯರು ಹಸ್ತಕ್ಷೇಪ ಮಾಡಬಾರದು' ಎಂದು ಹೇಳಿಕೆ ನೀಡಿತ್ತು. ಈ ಹೇಳಿಕೆಯನ್ನು ಹಲವು ಭಾರತೀಯ ಗಣ್ಯರು ಟ್ವೀಟ್ ಮಾಡಿದ್ದರು. ಈ ಕುರಿತಾದಂತೆ ಇದೀಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ಬೌಲರ್ ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿದ ಅವರು "ಅಮೆರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬಾತ ಅಮೆರಿಕನ್ ಪೊಲೀಸರಿಂದ ಕ್ರೂರವಾಗಿ ಹತ್ಯೆಗೊಳಗಾದ ಸಂದರ್ಭದಲ್ಲಿ ನಮ್ಮ ದೇಶವು ಆ ಘಟನೆಯ ಕುರಿತಾದಂತೆ ದುಃಖ ವ್ಯಕ್ತಪಡಿಸಿತ್ತು ಎಂದಿದ್ದಾರೆ. ಜೊತೆಗೆ #ಜಸ್ಟ್ ಸೇಯಿಂಗ್ ಎಂಬ ಹ್ಯಾಶ್ ಟ್ಯಾಗ್ ಅನ್ನೂ ಬಳಸಿದ್ದಾರೆ.
ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ಸರಕಾರದ ಪರವಾಗಿ ಟ್ವೀಟ್ ಮಾಡಿದ ಬೆನ್ನಲ್ಲೇ ಇರ್ಫಾನ್ ಪಠಾಣ್ ರ ಟ್ವೀಟ್ ವೈರಲ್ ಆಗಿದೆ. "ವಿಷಯ ಕೋಡ್ ವರ್ಡ್ ಗಳಲ್ಲಿದ್ದರೂ ನೀವು ಸರಿಯಾದ ಮಾತನ್ನೇ ಹೇಳಿದ್ದೀರಿ" ಎಂದು ಬಳಕೆದಾರರೋರ್ವರು ಪ್ರತಿಕ್ರಿಯೆ ನೀಡಿದ್ದಾರೆ.
When George Floyd was brutally murdered in the USA by a policeman,our country rightly expressed our grief. #justsaying
— Irfan Pathan (@IrfanPathan) February 4, 2021
Codewords mein hi sahi, at least you said something...
— Md Asif Khan (@imMAK02) February 4, 2021







