ಫೆ.6ರಂದು ತನುಶ್ರೀಯಿಂದ ಆರನೆ ವಿಶ್ವದಾಖಲೆಗೆ ಪ್ರಯತ್ನ

ಉಡುಪಿ, ಫೆ.4: ಐದು ವಿಶ್ವ ದಾಖಲೆಗಳ ಸರಿದಾರಿಣಿ, ಯೋಗಪಟು ತನುಶ್ರೀ ಪಿತ್ರೋಡಿ ಆರನೆ ವಿಶ್ವದಾಖಲೆಗಾಗಿ ಒಂದು ನಿಮಿಷದಲ್ಲಿ ಅತೀ ಹೆಚ್ಚು ಬಾರಿ ಬ್ಯಾಕ್‌ವರ್ಡ್ ಬಾಡಿ ಸ್ಕೀಪ್ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ.
ಉಡುಪಿ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ 12ರ ಹರೆಯದ ತನುಶ್ರೀ, ಈ ವಿಶ್ವದಾಖಲೆಯ ಪ್ರಯತ್ನವನ್ನು ಫೆ.6ರಂದು ಸಂಜೆ 4.30ಕ್ಕೆ ಸೈಂಟ್ ಸಿಸಿಲಿಸ್ ಸಮೂಹ ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ನಡೆಸ ಲಿರುವರು ಎಂದು ತನುಶ್ರೀ ತಂದೆ ಉದಯ ಕುಮಾರ್ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದ್ದಾರೆ.
ಗೋಲ್ಡನ್ ಬುಕ್‌ನಲ್ಲಿ ಇದು ಹೊಸ ದಾಖಲೆಯಾಗಿದ್ದು, ಗಿನ್ನಿಸ್ ವಲ್ಡ್ ರೆಕಾರ್ಡ್‌ನಲ್ಲಿ ಈ ಹಿಂದೆ 48 ಬಾರಿ ಬ್ಯಾಕ್‌ವರ್ಡ್ ಬಾಡಿ ಸ್ಕೀಪ್ ಮಾಡಿ ರುವ ದಾಖಲೆ ಇದೆ. ಆದರೆ ವಯಸ್ಸಿನ ಸಮಸ್ಯೆಯಿಂದ ತನುಶ್ರೀಗೆ ಇದರಲ್ಲಿ ಗಿನ್ನಿಸ್ ದಾಖಲೆ ಮಾಡಲು ಅವಕಾಶ ದೊರೆತಿಲ್ಲ. ಆದುದರಿಂದ ಗೋಲ್ಡನ್ ಬುಕ್‌ನಲ್ಲಿ ದಾಖಲೆ ನಿರ್ಮಿಸಲಾಗುವುದು. ತನುಶ್ರೀ ಗಿನ್ನಿಸ್‌ನಲ್ಲಿ ಇರುವ ದಾಖಲೆಯನ್ನು ಮುರಿಯುವ ಪ್ರಯತ್ನ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ತನುಶ್ರೀ, ಸುರಭಿ ರತನ್ ಉಡುಪಿ, ವಿಜಯ ಕೋಟ್ಯಾನ್, ರವೀಂದ್ರ ಶೇರಿಗಾರ್ ಉಪಸ್ಥಿತರಿದ್ದರು.







