ಉಡುಪಿ : ದಿನದಲ್ಲಿ 163 ಮಂದಿಗೆ ಲಸಿಕೆ
ಉಡುಪಿ, ಫೆ.4: ನಾಲ್ಕು ದಿನಗಳ ಬಿಡುವಿನ ಬಳಿಕ ಗುರುವಾರ ಜಿಲ್ಲೆಯಲ್ಲಿ ವೈದ್ಯರೂ ಸೇರಿದಂತೆ ಒಟ್ಟು 163 ಮಂದಿ ಆರೋಗ್ಯ ಕಾರ್ಯಕರ್ತರು ಕೋವಿಡ್-19ಕ್ಕೆ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಕೋವಿಡ್ ವಿರುದ್ಧದ ವ್ಯಾಕ್ಸಿನೇಷನ್‌ನ ಮೊದಲ ಹಂತದಲ್ಲಿ ಒಟ್ಟು 25,350 ಮಂದಿ ಕೊರೋನಾ ವಾರಿಯರ್ಸ್‌ಗೆ ಕೋವಿಡ್ ಲಸಿಕೆ ನೀಡುವ ಗುರಿ ಇದ್ದು, ಈವರೆಗೆ 12,566 ಮಂದಿ ಮಾತ್ರ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಶೇ.49.57ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದವರು ವಿವರಿಸಿದರು.
Next Story





