ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ವೈದ್ಯಾಧಿಕಾರಿಗಳಿಗೆ ಸನ್ಮಾನ

ಮಣಿಪಾಲ, ಫೆ.4: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ವೈದ್ಯಾಧಿಕಾರಿಗಳನ್ನು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯ ತಿಯಿಂದ ಇಂದು ಸನ್ಮಾನಿಸ ಲಾಯಿತು.
ಕ್ಯಾನ್ಸರ್ ವಿಭಾಗದ ಅಂಕೋಲಜಿ ಮುಖ್ಯಸ್ಥ ಡಾ.ಕಾರ್ತಿಕ್ ಉಡುಪ, ಸರ್ಜಿಕಲ್ ಒಂಕೊಲೊಜಿ ಮುಖ್ಯಸ್ಥ ಡಾ.ನವೀನ್ ಕುಮಾರ್, ರೇಡಿಯೋ ತೇರೇಪಿ ಒಂಕೋಲಿಜಿ ಮುಖ್ಯಸ್ಥ ಡಾ.ಕೃಷ್ಣ ಶರಣ್ ಅವರನ್ನು ಸನ್ಮಾನಿಸಿ ಗೌರವಿ ಸಲಾಯಿತು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಡೈಮಂಡ್ಸ್ನ ಮಾರ್ಕೆಟಿಂಗ್ ಮುಖ್ಯಸ್ಥ ರಾಘವೇಂದ್ರ ನಾಯಕ್ ಮತ್ತು ತಂಝಿಮ್, ನಿತಿನ್ ಶೇಟ್ ಮತ್ತು ಆಸ್ಪತ್ರೆಯ ಮಾರ್ಕೆಟಿಂಗ್ ಮುಖ್ಯಸ್ಥರಾದ ಸಚಿನ್ ಕಾರಂತ್, ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕೃಷ್ಣ ಪ್ರಸಾದ್ ಸ್ವಾಗತಿಸಿ, ವಂದಿಸಿದರು.
Next Story





