ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಉಡುಪಿ, ಫೆ. 4: ಹೆಂಡತಿ ಹಾಗೂ ಮಗು ದೂರಾಗಿರುವ ವಿಚಾರದಲ್ಲಿ ಮನನೊಂದು ಜೀವನ ದಲ್ಲಿ ಜಿಗುಪ್ಸೆ ಹೊಂದಿದ ಬನ್ನಂಜೆಯ ಟಿ.ಶರತ್ (35) ಎಂಬವರು ಫೆ.3ರಂದು ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವರಂಗ ಗ್ರಾಮದ ಮಾತಿ ಬೆಟ್ಟು ನಿವಾಸಿ ಸಂಜೀವ ಪೂಜಾರಿ ಎಂಬವರ ಪತ್ನಿ ಮಾಲಿನಿ(48) ಎಂಬವರು ಫೆ.3ರಂದು ಮನೆಯ ಮಲಗುವ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





