ತಂಡದಿಂದ ಯುವತಿಗೆ ಹಲ್ಲೆ ಪ್ರಕರಣ: ಮತ್ತೋರ್ವ ಸೆರೆ
ಮಂಗಳೂರು, ಫೆ.4: ನಗರದ ಬೆಂದೂರುವೆಲ್ ಹೊಟೇಲೊಂದರಲ್ಲಿ ಜ.31ರಂದು ತಂಡವೊಂದು ಯುವತಿ ಹಾಗು ಆಕೆಯ ಜತೆಗಿದ್ದ ಸ್ನೇಹಿತರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಅತ್ತಾವರದ ಸೌರಜ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಇನ್ನೂ ಕೆಲವರು ಬಂಧನಕ್ಕೆ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ತ್ರಿಶೂಲ್ ಸಾಲ್ಯಾನ್, ಈತನ ಸ್ನೇಹಿತರಾದ ಸಂತೋಷ್ ಪೂಜಾರಿ, ಡ್ಯಾನಿಷ್ ಅರೆನ್ ಡಿಕ್ರೂಸ್ ಅವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





