ಭಟ್ಕಳ: ದೋಣಿ ಮುಗುಚಿ ಮೀನುಗಾರ ಸಾವು
ಭಟ್ಕಳ : ತಾಲೂಕಿನ ವೆಂಕ್ಟಾಪುರ ಹೊಳೆಯಲ್ಲಿ ಮೀನುಗಾರಿಕೆ ತೆರಳಿದ ಮೀನುಗಾರನೋರ್ವ ಪಾತಿ ದೋಣಿ ಮಗುಚಿ ಹೊಳೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಮೃತ ಮೀನುಗಾರನನ್ನು ಶಿರಾಲಿಯ ಮೊಗೇರ ಕೇರಿ ನಿವಾಸಿ ದುರ್ಗಪ್ಪ ಮೊಗೇರ(75) ಎಂದು ತಿಳಿದು ಗುರುತಿಸಲಾಗಿದೆ. ಇವರು ಬುಧವಾರ ದಂದು ಶಿರಾಲಿಯ ಮೊಗೇರಕೆರಿಯಿಂದ ಒಬ್ಬರೇ ಪಾತಿದೋಣಿಯಲ್ಲಿ ವೆಂಕ್ಟಾಪುರ ಹೊಳೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಮಯದಲ್ಲಿ ಪಾತಿ ದೋಣಿ ಹೊಳೆಯಲ್ಲಿ ಮಗುಚಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ .ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story





