ಶೇ.5ರಷ್ಟು ತೆರಿಗೆ ರಿಯಾಯಿತಿ ವಿಧೇಯಕಕ್ಕೆ ಅಂಗೀಕಾರ
ಬೆಂಗಳೂರು, ಫೆ.4: 2021ನೆ ಸಾಲಿನ ಕರ್ನಾಟಕ ಪೌರಸಭೆಗಳು ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕವನ್ನು ಮಂಡಿಸಿದ ಪೌರಾಡಳಿತ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಎಂ.ಟಿ.ಬಿ.ನಾಗರಾಜ್, 2020-21ನೆ ಹಣಕಾಸು ವರ್ಷದಲ್ಲಿ ಕೋವಿಡ್-19ರ ಸಾಂಕ್ರಾಮಿಕದಿಂದಾಗಿ, ಆಸ್ತಿ ತೆರಿಗೆ ಪಾವತಿಯ ಕಾಲಮಿತಿಯನ್ನು ವಿಸ್ತರಿಸಲು ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಅಲ್ಲದೆ, ಈ ತಿದ್ದುಪಡಿ ಅಧಿನಿಯಮದ ಪ್ರಾರಂಭದ ದಿನಾಂಕದಿಂದ(ಎಪ್ರಿಲ್ 1ರಿಂದ) ಒಂದು ತಿಂಗಳ ಒಳಗಾಗಿ ತೆರಿಗೆಯನ್ನು ಪಾವತಿಸಿದ ಸಂದರ್ಭದಲ್ಲಿ ಶೇ.5ರ ರಿಯಾಯಿತಿಯನ್ನು ನೀಡಲಾಗುವುದು ಎಂದು ನಾಗರಾಜ್ ಹೇಳಿದರು.
Next Story





