ಭಾರತ, ರಶ್ಯದಿಂದ 3 ಕೋಟಿ ಕೊರೋನ ಲಸಿಕೆ ಖರೀದಿ: ಬ್ರೆಝಿಲ್

ಬ್ರೆಸೀಲಿಯ (ಬ್ರೆಝಿಲ್), ಫೆ. 4: ರಶ್ಯ ಮತ್ತು ಭಾರತದಿಂದ ಕೊರೋನ ವೈರಸ್ ಲಸಿಕೆಯ ಮೂರು ಕೋಟಿ ಡೋಸ್‌ಗಳನ್ನು ಖರೀದಿಸುವ ನಿಟ್ಟಿನಲ್ಲಿ ಆ ದೇಶಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಬ್ರೆಝಿಲ್ ಸರಕಾರ ಬುಧವಾರ ಘೋಷಿಸಿದೆ.
ಅಮೆರಿಕದ ಬಳಿಕ, ಕೊರೋನ ವೈರಸ್ ಸಾಂಕ್ರಾಮಿಕದ ದಾಳಿಯಿಂದ ಅತಿ ಹೆಚ್ಚು ಹಾನಿಗೊಳಗಾದ ಎರಡನೇ ದೇಶ ಬ್ರೆಝಿಲ್ ಆಗಿದೆ. ಅಲ್ಲಿ ಮಾರಕ ಸಾಂಕ್ರಾಮಿಕದಿಂದಾಗಿ 2,26,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಬ್ರೆಝಿಲ್‌ನಲ್ಲಿ ಈವರೆಗೆ ಬ್ರಿಟನ್‌ನ ಆಕ್ಸ್‌ಫರ್ಡ್-ಆ್ಯಸ್ಟ್ರಝೆನೆಕ ಮತ್ತು ಚೀನಾದ ಕೊರೋನವ್ಯಾಕ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.
ಇನ್ನು ಮುಂದೆ ಲಸಿಕೆಗಳ ಮೂರನೇ ಹಂತದ ಪ್ರಯೋಗಗಳನ್ನು ಬ್ರೆಝಿಲ್‌ನಲ್ಲಿ ಮಾಡಬೇಕಾಗಿಲ್ಲ ಎಂದು ಬ್ರೆಝಿಲ್‌ನ ಆರೋಗ್ಯ ನಿಗಾ ಇಲಾಖೆ ಹೇಳಿದೆ ಹಾಗೂ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡುವ ಪ್ರಕ್ರಿಯೆಗಳಿಗೆ ಹಸಿರುನಿಶಾನೆ ತೋರಿಸಿದೆ.
Next Story





