ರಶ್ಯ ಜೊತೆಗಿನ ಪರಮಾಣು ಒಪ್ಪಂದ 5 ವರ್ಷ ವಿಸ್ತರಿಸಿದ ಅಮೆರಿಕ

ವಾಶಿಂಗ್ಟನ್, ಫೆ. 4: ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ಸರಕಾರವು ರಶ್ಯದೊಂದಿಗಿನ ಪರಮಾಣು ಒಪ್ಪಂದವನ್ನು ಬುಧವಾರ ಐದು ವರ್ಷಗಳ ಅವಧಿಗೆ ವಿಸ್ತರಿಸಿದೆ. ರಶ್ಯ ಜೊತೆಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಹೊರತಾಗಿಯೂ, ಈ ಒಪ್ಪಂದವು ಶಸ್ತ್ರಾಸ್ತ್ರ ಸ್ಪರ್ಧೆಯನ್ನು ನಿವಾರಿಸಲಿದೆ ಎಂದು ಭಾವಿಸಿರುವುದಾಗಿ ಅಮೆರಿಕ ಹೇಳಿದೆ.
ರಶ್ಯ ಜೊತೆಗಿನ ಪರಮಾಣು ಒಪ್ಪಂದವನ್ನು 5 ವರ್ಷಗಳ ಅವಧಿಗೆ ವಿಸ್ತರಿಸಿರುವುದಾಗಿ ಒಪ್ಪಂದ ಕೊನೆಗೊಳ್ಳುವ ಒಂದು ದಿನದ ಮೊದಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹೇಳಿದ್ದಾರೆ.
‘‘ಸ್ಥಿರತೆ, ಪಾರದರ್ಶಕತೆ ಮತ್ತು ನಿರೀಕ್ಷೆಯ ಸಾಧ್ಯತೆಗಳನ್ನು ಹೆಚ್ಚಿಸುವ ಹಾಗೂ ದುಬಾರಿ ಮತ್ತು ಅಪಾಯಕಾರಿಯಾಗಿರುವ ಶಸ್ತ್ರಾಸ್ತ್ರ ಸಮರದ ಅಪಾಯವನ್ನು ಕಡಿಮೆಗೊಳಿಸುವ ಪರಿಣಾಮಕಾರಿ ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ಅವೆುರಿಕ ಬದ್ಧವಾಗಿದೆ’’ ಎಂದು ಬ್ಲಿಂಕನ್ ಹೇಳಿದ್ದಾರೆ.
Next Story





