ನೊಬೆಲ್ ಶಾಂತಿ ಪ್ರಶಸ್ತಿಗೆ ಹಾಂಕಾಂಗ್ ಚಳವಳಿ ಶಿಫಾರಸು

ವಾಶಿಂಗ್ಟನ್, ಫೆ. 4: ಅಮೆರಿಕದ ಸಂಸದರು ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಚಳವಳಿಯನ್ನು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಶಿಫಾರಸು ಮಾಡಿದ್ದಾರೆ. ಹಾಂಕಾಂಗ್‌ನ ಪ್ರಜಾಪ್ರಭುತ್ವ ಪರ ಚಳವಳಿಗಾರರು ಚೀನಾದ ದಮನ ಕಾರ್ಯಾಚರಣೆಯನ್ನು ಎದುರಿಸುತ್ತಿದ್ದು ಜಾಗತಿಕ ಸ್ಫೂರ್ತಿಯಾಗಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
2019 ಜೂನ್ 16ರಂದು 20 ಲಕ್ಷಕ್ಕೂ ಅಧಿಕ ಚಳವಳಿಗಾರರು ಬೀದಿಗಿಳಿದು ಧರಣಿ ನಡೆಸಿದ್ದಾರೆ ಎಂದು ನೊಬೆಲ್ ಸಮಿತಿಗೆ ಸಲ್ಲಿಸಿದ ಪತ್ರವೊಂದರಲ್ಲಿ ವಿವಿಧ ಪಕ್ಷಗಳ ಒಂಭತ್ತು ಸಂಸದರು ಹೇಳಿದ್ದಾರೆ.
Next Story





