ಖ್ಯಾತ ಇತಿಹಾಸಕಾರ ದ್ವಿಜೇಂದ್ರ ನಾರಾಯಣ ಝಾ ನಿಧನ

ಹೊಸದಿಲ್ಲಿ: ಖ್ಯಾತ ಇತಿಹಾಸಕಾರ ದ್ವಿಜೇಂದ್ರ ನಾರಾಯಣ ಝಾ ಅವರು ಗುರುವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
ದಿಲ್ಲಿ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿರುವ ಝಾ ಅವರು ಪ್ರಾಚೀನ ಭಾರತೀಯ ಇತಿಹಾಸದ ಪ್ರತಿಷ್ಠಿತ ವಿದ್ವಾಂಸರಾಗಿದ್ದರು.
ಕೋಲ್ಕತಾದ ಪ್ರೆಸಿಡೆನ್ಸಿ ಕಾಲೇಜಿನಿಂದ ಇತಿಹಾಸದಲ್ಲಿ ಪದವಿ ಪಡೆದಿದ್ದ ಝಾ ಪಾಟ್ನಾ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೂರು ದಶಕಗಳಿಗೂ ಅಧಿಕ ಸಮಯ ವೃತ್ತಿಜೀವನವನ್ನು ಕಳೆದಿದ್ದ ಅವರು 1991ರಲ್ಲಿ ಪ್ರಸಿದ್ದ ದಾಖಲೆಯನ್ನು ಸಿದ್ದಪಡಿಸಿದ ಮೂವರು ಇತಿಹಾಸಕಾರರಲ್ಲಿ ಒಬ್ಬರಾಗಿದ್ದರು. ದೇವಾಲಯವನ್ನು ನೆಲಸಮಗೊಳಿಸಿದ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂದು ವಾದಿಸಿದ್ದರು.
Next Story





