ಮ್ಯಾನ್ಮಾರ್: ಸೂ ಕಿಯ ಕಟ್ಟಾ ಬೆಂಬಲಿಗನ ಬಂಧನ

ಯಾಂಗನ್ (ಮ್ಯಾನ್ಮಾರ್), ಫೆ. 5: ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿಯ ಕಟ್ಟಾ ಬೆಂಬಲಿಗರೊಬ್ಬರನ್ನು ಸೇನಾಡಳಿತವು ಶುಕ್ರವಾರ ಬಂಧಿಸಿದೆ.
ಸೂ ಕಿಯ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ)ಯ ಪ್ರಮುಖ ನಾಯಕ ವಿನ್ ಹಟೇನ್ ಗುರುವಾರ ಮಧ್ಯಾಹ್ನ ನೇಪಿಡಾವ್‌ನಿಂದ ಯಾಂಗನ್‌ಗೆ ಹೊರಟಿದ್ದರು ಎಂದು ಪಕ್ಷವು ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿದೆ.
‘‘ಅವರು ಯಾಂಗನ್‌ನಲ್ಲಿರುವ ತನ್ನ ಮಗಳ ಮನೆಯಲ್ಲಿ ತಂಗಿದ್ದಾಗ ಮಧ್ಯರಾತ್ರಿ ಬಂಧಿಸಲಾಗಿದೆ’’ ಎಂದು ಪಕ್ಷದ ಸಾರ್ವಜನಿಕ ಸಂಪರ್ಕಾಧಿಕಾರಿ ಕೀ ಟೋ ಹೇಳಿದರು.
ಮ್ಯಾನ್ಮಾರ್ ಸೇನೆಯು ಸೋಮವಾರ ಕ್ಷಿಪ್ರಕ್ರಾಂತಿ ನಡೆಸಿ ದೇಶದ ನಾಯಕಿ ಸೂ ಕಿ ಮತ್ತು ಅಧ್ಯಕ್ಷ ವಿನ್ ಮಿಂಟ್‌ರನ್ನು ಬಂಧಿಸಿದೆ ಹಾಗೂ ಸೇನೆಯ ಮುಖ್ಯಸ್ಥ ಮಿನ್ ಆಂಗ್ ಹಲಯಂಗ್ ದೇಶದ ಆಡಳಿತವನ್ನು ವಹಿಸಿಕೊಂಡಿದ್ದಾರೆ.
Next Story





