ಫೆ.7: ‘ದಿ ಸರ್ಜಿಕಲ್ ಸೆಂಟರ್’ ಉದ್ಘಾಟನೆ
ಮಂಗಳೂರು, ಫೆ.5: ನಗರದ ನ್ಯೂ ಬಲ್ಮಠ ರಸ್ತೆಯ ಜ್ಯೋತಿ ಸಮೀಪದ ಮನಾರ್ ಕಾಂಪ್ಲೆಕ್ಸ್‌ನ ತಳಮಹಡಿಯಲ್ಲಿ ‘ದಿ ಸರ್ಜಿಕಲ್ ಸೆಂಟರ್’ನ ಉದ್ಘಾಟನೆ ಕಾರ್ಯಕ್ರಮವು ಫೆ.7ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
‘ದಿ ಸರ್ಜಿಕಲ್ ಸೆಂಟರ್’ನಲ್ಲಿ ಆರ್ಥೋಪೆಡಿಕ್ ಉಪಕರಣಗಳಾದ ಕಂಪ್ರೆಸ್ಸೆನ್ ಸ್ಟೋಕಿಂಗ್ಸ್, ಏರ್ ಬೆಡ್, ವಾಟರ್ ಬೆಡ್, ರಿಹೇಬ್ಲೇಶನ್ ಕಿಟ್, ವ್ಹೀಲ್ ಚೇರ್, ಕಮೋಡ್ ಚೇರ್, ಡಿವಿಟಿ ಪಂಪ್ಸ್, ಜನರಲ್ ಗೂಡ್ಸ್ ನೆಬುಲೈಸರ್, ಡಯಬೆಟಿಕ್ ಫೂಟ್‌ಕೇರ್, ಗ್ಲುಕೋಮೀಟರ್ಸ್ ಆ್ಯಂಡ್ ಸ್ಟ್ರಿಪ್ಸ್, ಸರ್ಜಿಕಲ್ ಕವಚ, ಡಿಸ್ಪೋಸೆಬಲ್ ಉತ್ಪನ್ನಗಳು, ಸರ್ಜಿಕಲ್ ಸಲಕರಣೆಗಳು ಇತ್ಯಾದಿ ಲಭ್ಯವಿದೆ. ರವಿವಾರ ಸಹಿತ ವಾರದ ಎಲ್ಲಾ ದಿನಗಳಲ್ಲೂ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ‘ಸೆಂಟರ್’ ತೆರೆದಿರುತ್ತದೆ. ರೋಗಿಗಳ ಉಪಚಾರಕ್ಕೆ ಸಂಬಂಧಿಸಿದ ಸಲಕರಣೆ ಅಥವಾ ಉಪಕರಣಗಳನ್ನು ಅತ್ಯಂತ ಕಡಿಮೆ ಬಾಡಿಗೆ ದರದಲ್ಲಿ ನೀಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಅಲ್ಲದೆ ಎನ್‌ಜಿಒ, ಚಾರಿಟೇಬಲ್ ಟ್ರಸ್ಟ್‌ಗಳಿಗೆ ವಿಶೇಷ ರಿಯಾಯಿತಿ ದರದ ಸೌಲಭ್ಯವನ್ನು ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 0824-4260777, 8867055777ನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





