ಎಟಿಎಂ ವಂಚಕ ಮುಂಡಗೋಡ ಪೊಲೀಸರ ಬಲೆಗೆ

ಮುಂಡಗೋಡ: ಎಟಿಎಂ ಕಾರ್ಡ್ ಬದಲಾಯಿಸಿ ಜನರ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಅಂತರ ಜಿಲ್ಲಾ ವಂಚಕನನ್ನು ಮುಂಡಗೋಡ ಪೊಲೀಸರು ಬಂದಿಸಿದ್ದಾರೆ. ಬಂದಿತನಿಂದ 47,500/- ರೂ. ಹಾಗೂ ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೇರೂರ ತಾಲೂಕಿನ ಹೀರೆಮೊರಬ ಗ್ರಾಮದ ಗಿರೀಶ ಸಿದ್ದಪ್ಪ ಮುನಿಯಪ್ಪನವರ ಬಂಧಿತ ಆರೋಪಿ.
ಆರೋಪಿ ಗಿರೀಶ ಮುಂಡಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಎಸ್.ಬಿ.ಐ ಬ್ಯಾಂಕ್ ಎ.ಟಿ.ಎಂ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಹಣ ತೆಗೆದುಕೊಡುವ ನೆಪದಲ್ಲಿ ವ್ಯಕ್ತಿಯ ಎಟಿಎಂ ಕಾರ್ಡ್ ಪಡೆದು ಪಾಸವರ್ಡ್ ತಿಳಿದುಕೊಂಡು ತನ್ನಲ್ಲಿದ್ದ ಬೇರೆ ಎಟಿಎಂ ಕಾರ್ಡ್ ಹಿಂದಿರುಗಿಸಿ ಅದೇ ದಿನ ವ್ಯಕ್ತಿಯ ಎಟಿಎಂ ಕಾರ್ಡ್ ಪಡೆದು 20ಸಾವಿರ ರೂ ಡ್ರಾ ಮಾಡಿಕೊಂಡಿದ್ದಾನೆ. ಈ ಕುರಿತು ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಂಚಕನನ್ನು ಬಂದಿಸುವಲ್ಲಿ ಯಶಸ್ವಿಯಾದ ತಂಡದಲ್ಲಿನ ಪೊಲೀಸ ಇನ್ಸಪೇಕ್ಟರ ಪ್ರಭುಗೌಡ, ಪಿಎಸ್‌ಐ ಬಸವರಾಜ ಮಬನೂರ, ಪ್ರೋಬಷನರಿ ಪಿಎಸೈ ಬಾಬುದ್ದಿನ್, ಎಎಸ್‌ಐ ಅಶೋಕ ರಾಠೋಡ, ಕೆ.ಎನ್.ಘಟಕಾಂಬಳೆ, ಹಾಗೂ ಸಿಬ್ಬಂದಿಗಳಾದ ವಿನೋದಕುಮಾರ ಜಿ.ಬಿ, ಅರುಣ ಬಾಗೇವಾಡಿ, ಭಗವಾನ ಗಾಂವಕರ, ರಾಘವೇಂದ್ರ ನಾಯ್ಕ್, ತಿರುಪತಿ ಚೌಡಣ್ಣನವರ, ರಾಘವೇಂದ್ರ ಪಟಗಾರ ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.





