ಫೆ.6ರಿಂದ ಸಂತ ಆಂತೋನಿ ಆಶ್ರಮದ ನೊವೆನಾ ಆರಂಭ
ಮಂಗಳೂರು, ಫೆ.5: ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ನವ ದಿನಗಳ ನೊವೆನಾ ಪ್ರಾರ್ಥನೆ ಫೆ.6ರಿಂದ ಆರಂಭವಾಗಲಿದೆ.
ಈ ಹಬ್ಬಕ್ಕೆ ತಯಾರಿಯಾಗಿ ಫೆ.6ರಂದು ಸಂಜೆ 6ಕ್ಕೆ ಮಿಲಾಗ್ರಿಸ್ ಚರ್ಚಿನ ಧರ್ಮಗುರು ಫಾ. ಬೊನವೆಂಚರ್ ನಜರೇತ್ ಅವರು ಸಂತ ಆಂತೋನಿಯ ಧ್ವಜಾರೋಹಣ ಮಾಡುವ ಮೂಲಕ ನವದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ ಸಿಗಲಿದೆ. ಫೆ.15 ರಂದು ಮಿಲಾಗ್ರಿಸ್ ದೇವಾಲಯದ ತೆರೆದ ಮೈದಾನದಲ್ಲಿ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬವನ್ನು ಆಚರಿಸಲಾಗುತ್ತದೆ.
ಒಂಬತ್ತು ದಿನಗಳ ನವೇನ ಪ್ರಾರ್ಥನೆಯಲ್ಲಿ ವಿವಿಧ ವರ್ಗಗಳ ಜನರಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಪರೀಕ್ಷೆ ಬರೆಯುವ ಮಕ್ಕಳಿಗೆ, ಹಿರಿಯ ನಾಗರಿಕರಿಗಾಗಿ, ವ್ಯಾಪಾಸ್ಥರಿಗಾಗಿ, ಕೆಟ್ಟ ಚಟಗಳಿಗೆ ಬಲಿಯಾದವರಿಗಾಗಿ, ದಂಪತಿಗಾಳಿಗಾಗಿ, ನಿರುದ್ಯೋಗಿಗಳಿಗಾಗಿ ಹೀಗೆ ನಾನಾ ತರಹದ ಕಷ್ಟ-ಸಂಕಷ್ಟಗಳಿಗೆ ಸಿಲುಕಿದವರಿಗಾಗಿ ಸಾಂತ್ವಾನ ಸಿಗಲೆಂದು ಸಂತ ಆಂತೋನಿಯವರ ವಿಶೇಷ ಕೋರಿಕೆಗಾಗಿ ಪ್ರಾರ್ಥಿಸಲಾಗುತ್ತದೆ ಎಂದು ಆಶ್ರಮದ ನಿರ್ದೇಶಕ ಫಾ. ಒನಿಲ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





