ಖಾಜಿ ಝೈಬುನ್ನೀಸಾ, ಆದಿತ್ಯ ಸೋಂಧಿ, ರಾಜೇಂದ್ರ ಬಾದಾಮಿಕರ್ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು

ಬೆಂಗಳೂರು, ಫೆ.5: ಹಿರಿಯ ವಕೀಲ ಆದಿತ್ಯ ಸೋಂಧಿ, ನ್ಯಾಯಾಂಗ ಅಧಿಕಾರಿಗಳಾದ ರಾಜೇಂದ್ರ ಬಾದಾಮಿಕರ್ ಹಾಗೂ ಖಾಜಿ ಝೈಬುನ್ನೀಸಾ ಮೊಹಿಯುದ್ದಿನ್ ಅವರನ್ನು ರಾಜ್ಯ ಹೈಕೋರ್ಟ್‍ನ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಫೆ.4ರಂದು ನಡೆಸಿದ ಸಭೆಯಲ್ಲಿ ಈ ಮೂವರ ಹೆಸರನ್ನು ಅಂತಿಮಗೊಳಿಸಿ, ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದೆ.
ಎನ್‍ಎಲ್‍ಎಸ್‍ಐಯುನಲ್ಲಿ ಕಾನೂನು ಪದವಿ ಪಡೆದಿರುವ ಆದಿತ್ಯ ಸೋಂಧಿ 1998ರಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. 2014ರಲ್ಲಿ ಹೈಕೋರ್ಟ್‍ನ ಹಿರಿಯ ವಕೀಲರಾಗಿ ಪದೋನ್ನತಿ ಪಡೆದಿದ್ದ ಇವರನ್ನು ರಾಜ್ಯ ಸರಕಾರ 2016ರಲ್ಲಿ ಹೆಚ್ಚುವರಿ ಅಡ್ವಕೇಟ್ ಜನರಲ್ ಹುದ್ದೆಗೆ ನಿಯೋಜಿಸಿತ್ತು.
ರಾಜೇಂದ್ರ ಬಾದಾಮಿಕರ್ ಹೈಕೋರ್ಟ್‍ನ ಬೆಂಗಳೂರು ಪ್ರಧಾನ ಪೀಠದಲ್ಲಿ ರಿಜಿಸ್ಟ್ರಾರ್ ಜನರಲ್ ಆಗಿದ್ದರೆ, ಖಾಜಿ ಝೈಬುನ್ನೀಸಾ ಮೊಹಿಯುದ್ದಿನ್ ವಿಜಿಲೆನ್ಸ್ ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Next Story





