ಗಾಂಜಾ ಮಾರಾಟ: ಓರ್ವನ ಸೆರೆ
ಉಡುಪಿ, ಫೆ.6: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ನನ್ನು ಉಡುಪಿ ಸೆನ್ ಪೊಲೀಸರು ಮಣಿಪಾಲ ವಿದ್ಯಾರತ್ನ ನಗರದ ಅದಿತಿ ಪರ್ವ ಅಪಾರ್ಟ್‌ಮೆಂಟ್ ಬಳಿ ಫೆ.6ರಂದು ಬಂಧಿಸಿದ್ದಾರೆ.
ಮುಂಬೈ ಮೂಲದ ಮಣಿಪಾಲ ನಿವಾಸಿ ವೇದಾಂತ ಶೆಟ್ಟಿ(20) ಬಂಧಿತ ಆರೋಪಿ. ಈತನಿಂದ 9000 ರೂ. ಮೌಲ್ಯದ 318 ಗ್ರಾಂ ತೂಕದ ಗಾಂಜಾ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





