ಮಂಗಳೂರು ನಗರದಾದ್ಯಂತ ವಾಹನ ತಪಾಸಣೆ ಚುರುಕು

ಮಂಗಳೂರು, ಫೆ.6: ನಗರದಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ವಾಹನ ತಪಾಸಣೆ ಚುರುಕುಗೊಂಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ಪೊಲೀಸರು ವಾಹನದ ದಾಖಲೆಗಳನ್ನು ತಪಾಸಣೆ ನಡೆಸಿದರು.
ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ದಂಡ ಪಾವತಿಸದೆ ಇರುವ ವಾಹನಗಳನ್ನು ಗುರುತಿಸುವ ಉದ್ದೇಶದಿಂದ ಈ ತಪಾಸಣೆ ನಡೆಯಿತು. ಲಾಲ್‌ಭಾಗ್, ಕದ್ರಿ, ಕೊಟ್ಟಾರ, ನಂತೂರು, ಪಂಪ್‌ವೆಲ್, ಕಂಕನಾಡಿ, ವೆಲೆನ್ಸಿಯ, ಹಂಪನಕಟ್ಟೆ ಕ್ಲಾಕ್ ಟವರ್, ಕಾವೂರು, ಪಡೀಲ್ ಮೊದಲಾದ ಕಡೆ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸಿದರು.
ತಡರಾತ್ರಿವರೆಗೂ ತಪಾಸಣೆ ಮುಂದುವರಿಯಿತು. ವಾರಾಂತ್ಯವಾದ ಕಾರಣ ಮದ್ಯ ಸೇವಿಸಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದವರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





