ಕೊಟ್ಟಾರ: 6 ಸಾವಿರ ರೂ. ಮೌಲ್ಯದ ಹಾಲು ಕಳವು
ಮಂಗಳೂರು, ಫೆ.6: ನಗರದ ಕೊಟ್ಟಾರದಲ್ಲಿರುವ ಕೃಷ್ಣಾ ಮಿಲ್ಕ್ ಪಾರ್ಲರ್ ಆವರಣದಿಂದ ಎರಡು ಬಾರಿ ಒಟ್ಟು 6,244 ರೂ. ಮೌಲ್ಯದ ಹಾಲು ಕಳವಾಗಿದ್ದು, ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡಿ.30ರಂದು ರಾತ್ರಿ 1,660 ರೂ. ಮೌಲ್ಯದ 15 ಲೀ. ಹಾಗೂ ಫೆ.2ರಂದು 4,584 ರೂ. ಮೌಲ್ಯದ 36 ಲೀಟರ್ ಹಾಲು ಹಾಗೂ 3 ಬಾಕ್ಸ್ ಕಳ್ಳತನವಾಗಿದೆ. ಪ್ರತಿ ದಿನ ರಾತ್ರಿ ಅಂಗಡಿ ಬಂದ್ ಮಾಡಿ ತೆರಳಿದ ಬಳಿಕ ಹಾಲು ಸರಬರಾಜು ಮಾಡುವ ಟೆಂಪೋದವರು ಅಂಗಡಿಯ ಎದುರು ಹಾಲು ಪ್ಯಾಕೆಟ್ ತುಂಬಿದ ಬಾಕ್ಸ್‌ಗಳನ್ನು ಇಟ್ಟು ಹೋಗುತ್ತಾರೆ. ಇದರಿಂದ ಓರ್ವ ಯುವಕ ಹಾಗೂ ಯುವತಿ ಆಗಮಿಸಿ ಹಾಲು ಕಳವು ಮಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.
ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳನ್ನು ಉರ್ವ ಪೊಲೀಸರಿಗೆ ನೀಡಲಾಗಿದೆ. ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಪ್ರಕರಣದ ತನಿಖೆ ನಡೆಸುತ್ತಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
Next Story





