ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಅನ್ನದಾತರಿಗೆ ಜೈಕಾರ ಹಾಕಿದ ಎಸ್ಪಿ ಶ್ರೀನಿವಾಸ್ ಗೌಡ

ಹಾಸನ, ಫೆ.6: ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಅವರು ರೈತರಿಗೆ ಜೈಕಾರ ಹಾಕುವ ಮೂಲಕ ಪ್ರತಿಭಟನಾ ರೈತರ ಮೊಗದಲ್ಲಿ ಮೊಂದಹಾಸ ಮೂಡಿಸಿ ಮೂಲಕ ಗಮನಸೆಳೆದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಹಾಸನ ನಗರದ ಹೊರ ವಲಯ ಬೂವನಹಳ್ಳಿ ಬಳಿ ಬಸ್ತೆನಹಳ್ಳಿ ಕ್ರಾಸ್ ನಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಆಗಮಿಸಿದ ಎಸ್ಪಿ ಶ್ರೀನಿವಾಸ್ ಗೌಡ ಅವರು 'ಎಲ್ಲರೂ ಹೇಳ್ರಪ್ಪ. ಅನ್ನದಾತರಿಗೆ ಜಯವಾಗಲಿ' ಎಂದು ಎರಡು ಮೂರು ಬಾರಿ ಘೋಷಣೆ ಕೂಗಿದರು.
Next Story





