ಪೊಲೀಸ್ ಸಿಬ್ಬಂದಿಗೆ ಹಲ್ಲೆ ಪ್ರಕರಣ : ಮೂವರು ಆರೋಪಿಗಳು ವಶಕ್ಕೆ

ಭಟ್ಕಳ: ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊರ್ವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಭಟ್ಕಳ ನಗರ ಠಾಣೆಯ ಸಂದೀಪ ವೆಂಕಟ್ರಮಣ ಪಟಗಾರ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ. ಪಟ್ಟಣದ ಚೌಥನಿಯ ವಿನಾಯಕ ನಾಯ್ಕ, ಶಿವಾನಂದ ನಾಯ್ಕ, ಸುರೇಶ ನಾಯ್ಕ, ಕೃಷ್ಣಾ ನಾಯ್ಕ ಹಾಗೂ ಹಾಡುವಳ್ಳಿಯ ಹಸ್ರವಳ್ಳಿಯ ರಾಘವೇಂದ್ರ ನಾಯ್ಕ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





