ಚೀನಾ: 2ನೇ ಕೊರೋನ ಲಸಿಕೆಯ ಸಾರ್ವಜನಿಕ ಬಳಕೆಗೆ ಅಂಗೀಕಾರ
ಬೀಜಿಂಗ್ (ಚೀನಾ), ಫೆ. 6: ತನ್ನ ಕೊರೋನ ವೈರಸ್ ಲಸಿಕೆಯ ಸಾರ್ವಜನಿಕ ಬಳಕೆಗೆ ಚೀನಾದ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರವು ಅಂಗೀಕಾರ ನೀಡಿದೆ ಎಂದು ದೇಶದ ಔಷಧ ತಯಾರಿಕಾ ಸಂಸ್ಥೆ ಸಿನೊವ್ಯಾಕ್ ಬಯೋಟೆಕ್ ಶನಿವಾರ ತಿಳಿಸಿದೆ.
ಇದರೊಂದಿಗೆ ಚೀನಾದಲ್ಲಿ ಈವರೆಗೆ ಎರಡು ಕೊರೋನ ವೈರಸ್ ಲಸಿಕೆಗಳಿಗೆ ಅಂಗೀಕಾರ ದೊರೆತಂತಾಗಿದೆ. ಸರಕಾರಿ ಒಡೆತನದ ಚೀನಾ ನ್ಯಾಶನಲ್ ಫಾರ್ಮಸ್ಯೂಟಿಕಲ್ ಗ್ರೂಪ್ (ಸಿನೋಫಾರ್ಮ್)ಗೆ ಒಳಪಟ್ಟ ಬೀಜಿಂಗ್ನ ಔಷಧ ತಯಾರಿಕಾ ಕಂಪೆನಿಯೊಂದು ಅಭಿವೃದ್ಧಿಪಡಿಸಿದ ಲಸಿಕೆಗೆ ಚೀನಾವು ಡಿಸೆಂಬರ್ನಲ್ಲೇ ಅನುಮೋದನೆ ನೀಡಿದೆ.
Next Story