ಜೆಪ್ಪು: ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬ
ನವ ದಿನಗಳ ನೊವೆನಾ ಪ್ರಾರ್ಥನೆಗೆ ಚಾಲನೆ

ಮಂಗಳೂರು, ಫೆ.7: ನಗರದ ಜೆಪ್ಪು ಸಂತ ಆಂತೋನಿ ಆಶ್ರಮದ ವತಿಯಿಂದ ನಡೆಯುತ್ತಿರುವ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ಒಂಭತ್ತು ದಿನಗಳ ನೊವೆನ ಪ್ರಾರ್ಥನೆಗೆ ಶನಿವಾರ ಚಾಲನೆ ನೀಡಲಾಯಿತು.
ಮಿಲಾಗ್ರಿಸ್ ದೇವಾಲಯದ ಧರ್ಮಗುರು ಫಾ.ಬೊನವೆಂಚರ್ ನಝರೆತ್ ಅವರು ಸಂತ ಆಂತೋನಿಯವರ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮೊದಲ ದಿನದ ಬಲಿಪೂಜೆ ಅರ್ಪಿಸಿ ಪ್ರವಚನ ನೀಡಿದರು.
ಬಲಿಪೂಜೆಯ ಕೊನೆಗೆ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಸ್ಥೆಯ ನಿರ್ದೇಶಕ ಫಾ.ಓನಿಲ್ ಡಿಸೋಜ ನೊವೇನ ಪ್ರಾರ್ಥನೆ ನಡೆಸಿ ಕೊಟ್ಟರು. ಪವಿತ್ರಾತ್ಮರ ದೇವಾಲಯ, ಬಜಾಲ್‌ನ ಗಾಯನ ಮಂಡಳಿ ಭಕ್ತಿಗೀತೆ ಹಾಡಿ ದಿನದ ಭಕ್ತಿ ಕಾರ್ಯಕ್ರಮ ನಡೆಸಿಕೊಡಲು ಮುಂದಾಳತ್ವ ವಹಿಸಿದ್ದರು.

Next Story





