ಧರ್ಮಸ್ಥಳ: 15 ಕೋ.ರೂ. ವೆಚ್ಚದ ಚತುಷ್ಪಥ ರಸ್ತೆ ಲೋಕಾರ್ಪಣೆ

ಬೆಳ್ತಂಗಡಿ: ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಸಂದರ್ಶಿಸುವ ಭಕ್ತರ ಅನುಕೂಲಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾದ 15 ಕೋ.ರೂ. ವೆಚ್ಚದ ಚತುಷ್ಪಥ ರಸ್ತೆಯನ್ನು ಉಪಮುಖ್ಯಮಂತ್ರಿ, ಲೋಕೊಪಯೋಗಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ ಲೋಕಾರ್ಪಣೆಗೊಳಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಸುಮಾರು 15 ಕೋ.ರೂ. ಮೊತ್ತದಲ್ಲಿ 2 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ನಿರ್ಮಾಣಗೊಂಡಿದೆ. ಧರ್ಮಸ್ಥಳ ಸ್ನಾನಘಟ್ಟ ಸಮೀಪದಿಂದ ಶ್ರೀ ಕ್ಷೇ.ಧ. ಪ್ರೌಢಶಾಲೆಯವರೆಗೆ ಚತುಷ್ಪಥ ರಸ್ತೆ ನಿರ್ಮಿಸಲಾಗಿದೆ. 7.50 ಮೀ.ನಂತೆ ಎರಡು ಬದಿ ಒಟ್ಟು 15 ಮೀಟರ್ ಅಗಲವಾದ ರಸ್ತೆ ಮಧ್ಯ 2.50 ಮೀಟರ್ ಗಾರ್ಡನಿಂಗ್ ಗಾಗಿ ಮೀಡಿಯನ್ (ಡಿವೈಡರ್) ನಿರ್ಮಿಸಲಾಗಿದೆ.
ಉದ್ಘಾಟನೆಯ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ತಾಪಂ ಸದಸ್ಯೆ ಧನಲಕ್ಷ್ಮೀ, ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್ ಜೆ., ತಾ.ಪಂ ಇ.ಒ. ಕುಸುಮಾಧರ್ ಕೆ., ಲೋಕೋಪಯೋಗಿ ಇಲಾಖೆ ಕಾರ್ಯನಿವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಅನಾರು: ಸೇತುವೆ ನಿರ್ಮಾಣಕ್ಕೆ ಶಂಕು ಸ್ಥಾಪನೆ
ಚಾರ್ಮಾಡಿ ಗ್ರಾಮದ ಅನಾರು ಎಂಬಲ್ಲಿ ನೂತನವಾಗಿ ನಿರ್ವಾಣವಾಗುತ್ತಿರುವ ಸೇತುವೆಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು








