ಉತ್ತರಾಖಂಡ್ ಹಿಮಪಾತ : ಪೇಜಾವರ ಶ್ರೀ ಕಳವಳ

ಉಡುಪಿ : ಉತ್ತರಾಖಂಡ್ ನಲ್ಲಿ ರವಿವಾರ ಭೀಕರ ಹಿಮಪಾತ ಸಂಭವಿಸಿ, ಕೆಲವರು ಮೃತಪಟ್ಟು ಹಲವಾರು ಮಂದಿ ಕೊಚ್ಚಿ ಹೋಗಿ ಕಣ್ಮರೆಯಾಗಿರುವ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪ್ರಾಕೃತಿಕ ದುರ್ಘಟನೆಯಿಂದ ತೀವ್ರ ಬೇಸರವಾಗಿದೆ . ಇದರಿಂದ ಸಂತ್ರಸ್ತರಾಗಿರುವವರ ನೋವಿಗೆ ನಮ್ಮ ಸಹಾನುಭೂತಿ ಇದೆ . ಉತ್ತರಾಖಂಡ್ ರಾಜ್ಯದ ಸಮಸ್ತ ಜನತೆಯ ಶ್ರೇಯಸ್ಸಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ . ಘಟನೆಯಿಂದ ಮೃತರಾಗಿರುವವರಿಗೆ ದೇವರು ಸದ್ಗತಿಯನ್ನು ಕರುಣಿಸಲಿ . ನಾಪತ್ತೆಯಾಗಿರುವವರು ಯಾವುದೇ ಅಪಾಯವಿಲ್ಲದೆ ಶೀಘ್ರವಾಗಿ ಪತ್ತೆಯಾಗಲೆಂದು ಆಶಿಸುತ್ತೇವೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Next Story





