ನಾಲ್ಕು ಬ್ಯಾಂಕುಗಳಿಂದ ಮಾತ್ರ ನಿವೃತ್ತಿ ವೇತನ
ಉಡುಪಿ, ಫೆ.7: ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಪಡೆಯುವವರು ಭಾರತೀಯ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ವಿಲೀನಗೊಂಡ ಕಾರ್ಪೋರೇಷನ್ ಬ್ಯಾಂಕ್), ಬ್ಯಾಂಕ್ ಆಫ್ ಬರೋಡ (ವಿಲೀನಗೊಂಡ ವಿಜಯಾ ಬ್ಯಾಂಕ್) ಮತ್ತು ಕೆನರಾ ಬ್ಯಾಂಕ್ (ವಿಲೀನಗೊಂಡ ಸಿಂಡಿಕೇಟ್ ಬ್ಯಾಂಕ್) ಈ ನಾಲ್ಕು ಬ್ಯಾಂಕ್‌ಗಳಿಂದ ಮಾತ್ರ ಪಡೆಯಬಹುದು.
ಫೆ.4ರ ಸರಕಾರಿ ಆದೇಶದಂತೆ 2019ರ ಆಗಸ್ಟ್1ರಿಂದ ಹಾಗೂ ನಂತರ ನಿವೃತ್ತರಾದವರು, ನಿವೃತ್ತರಾಗುವವರು ಮೇಲಿನ ನಾಲ್ಕರಲ್ಲಿ ಒಂದು ಬ್ಯಾಂಕಿನ ಶಾಖೆಯಿಂದ ನಿವೃತ್ತ ವೇತನ ಪಡೆಯಲು ಅಭಿಮತ ನೀಡುವಂತೆ ನಿವೃತ್ತರ ಸಂಘದ ಕಾರ್ಯದರ್ಶಿ ಎಸ್.ಎಸ್.ತೋನ್ಸೆ ತಿಳಿಸಿದ್ದಾರೆ.
Next Story





