ಡಾ. ನಿತಿನ್ ಕುಮಾರ್‌ಗೆ ಪಿಎಚ್‌ಡಿ

ಉಡುಪಿ, ಫೆ.7: ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಮಹಾವಿದ್ಯಾಲಯದ ಶರೀರ ರಚನಾ ಸ್ನಾತಕೋತ್ತರ ವಿಭಾಗದ ಸಹಪ್ರಾಧ್ಯಾಪಕ ಡಾ.ನಿತಿನ್ ಕುಮಾರ್ ಮಂಡಿಸಿದ ಎ ಕ್ರಿಟಿಕಲ್ ಅನಾಲಿಸಿಸ್ ಆಪ್ ದಿ ಶರೀರ ರಚನಾ ಟರ್ಮಿನೋಲಜೀಸ್ ಇನ್ ಸುಶ್ರುತ ಸಂಹಿತ ಎಂಬ ಮಹಾಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಇವರು ಡಾ.ಗೋವಿಂದರಾಜು ಯು. ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದಾರೆ. ಇವರು ನಿರ್ಮಲ್ ಕುಮಾರ್ ಶೆಟ್ಟಿ ಮತ್ತು ಶಕುಂತಳ ಎನ್. ಶೆಟ್ಟಿ ದಂಪತಿ ಪುತ್ರನಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





