ಬಾವಿಗೆ ಬಿದ್ದು ಯುವಕ ಮೃತ್ಯು
ಕೋಟ, ಫೆ.7: ಯುವಕನೋರ್ವ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸಾಸ್ತಾನ ಪಾಂಡೇಶ್ವರದ ಹೆಗ್ರಿ ಎಂಬಲ್ಲಿ ನಡೆದಿದೆ.
ಮೃತರನ್ನು ಪಾಂಡೇಶ್ವರದ ರಾಮಚಂದ್ರ ಮೊಗವೀರ ಎಂಬವರ ಮಗ ಬಾಲ ಸುಬ್ರಮಣ್ಯ (30) ಎಂದು ಗುರುತಿಸಲಾಗಿದೆ. ಇವರು ಫೆ.5ರಂದು ರಾತ್ರಿ ಮನೆಯಿಂದ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ನಾಪತ್ತೆಯಾಗಿದ್ದರು.
ಬಳಿಕ ಹುಡುಕಾಡಿದಾಗ ಅವರ ಮೃತದೇಹ ಫೆ.7ರಂದು ಬೆಳಗ್ಗೆ 9ಗಂಟೆಗೆ ಮನೆಯ ಹತ್ತಿರದ ಖಾಲಿ ಜಾಗದಲ್ಲಿರುವ ಆವರಣವಿಲ್ಲದ ಬಾವಿಯಲ್ಲಿ ಪತ್ತೆಯಾಗಿದೆ. ಇವರು ಆಕಸ್ಮಿಕವಾಗಿ ಆವರಣವಿಲ್ಲದ ಬಾವಿಗೆ ಬಿದ್ದು ಅಥವಾ ಇನ್ನಾವುದೋ ಕಾರಣದಿಂದ ಬಿದ್ದಿರುವುದಾಗಿ ಪೊಲೀಸರು ತಿಳಿಸಿ ದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





