ದ.ಆಫ್ರಿಕ ಪ್ರಭೇದದ ವೈರಸ್ ವಿರುದ್ಧ ಆಸ್ಟ್ರಾಝೆನೆಕ ಲಸಿಕೆಪರಿಣಾಮಕಾರಿಯಲ್ಲ!

ಲಂಡನ್,ಫೆ.7: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ತಾನು ಅಭಿವೃದ್ಧಿಪಡಿಸಿರುವ ಲಸಿಕೆಯು, ದಕ್ಷಿಣ ಆಫ್ರಿಕ ಪ್ರಭೇದದ ಕೊರೋನ ವೈರಸ್‌ನಿಂದ ಸೀಮಿತ ಮಟ್ಟದ ರಕ್ಷಣೆಯನ್ನು ಮಾತ್ರವೇ ನೀಡಲು ಸಾಧ್ಯವಾಗುವಂತೆ ಕಾಣುತ್ತಿದೆ ಎಂದು ಬ್ರಿಟನ್ ಮೂಲದ ಔಷಧಿ ತಯಾರಕಸಂಸ್ತೆ ಆಸ್ಟ್ರಾಝೆನೆಕಾ ತಿಳಿಸಿದೆ.ದಕ್ಷಿಣ ಆಫ್ರಿಕ ಪ್ರಭೇದದ ಕೊರೋನ ವೈರಸ್ ವಿರುದ್ಧ ಕೊರೋನ ವೈರಸ್ ಲಸಿಕೆಯ ಪರಿಣಾಮಕಾರಿತ್ವವು ಗಣನೀಯವಾಗಿ ಕಡಿಮೆಯಾಗಿದೆ ಎಂದು ವಿಟ್‌ವಾಟರ್ಸಾಂಡ್‌ನ ದ. ಆಫ್ರಿಕ ವಿವಿ ಹಾಗೂ ಆಕ್ಸ್‌ಫರ್ಡ್ ವಿವಿ ಜಂಟಿಯಾಗಿ ನಡೆಸಿದ ಅಧ್ಯಯನ ವರದಿಯು ಬಹಿರಂಗಪಡಿಸಿದ ಬೆನ್ನಲ್ಲೇ ಆಸ್ಟ್ರಾಝೆನೆಕಾ ಈ ಹೇಳಿಕೆ ನೀಡಿದೆ.ದಕ್ಷಿಣ ಆಫ್ರಿಕ ಪ್ರಭೇದದ ಕೊರೋನ ವೈರಸ್ ಇತರ ಪ್ರಭೇದದ ವೈರಸ್‌ಗಳಿಗಿಂತ ಹೆಚ್ಚು ಕ್ಷಿಪ್ರವಾಗಿ ಹರಡುತ್ತಿರುವುದು ವಿಜ್ಞಾನಿಗಳು ಹಾಗೂ ಆರೋಗ್ಯಪಾಲನಾ ಅಧಿಕಾರಿಗಳಿಗೆ ಆತಂಕವನ್ನುಂಟು ಮಾಡಿದೆ.
Next Story





