ಬಿಜೆಪಿ ಪಿತೂರಿಯಿಂದ ಗಣರಾಜ್ಯೋತ್ಸವ ಹಿಂಸಾಚಾರ: ಅಧೀರ್ ರಂಜನ್ ಚೌಧರಿ

ಹೊಸದಿಲ್ಲಿ, ಫೆ.8: ದಿಲ್ಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ಭುಗಿಲೆದ್ದ ಹಿಂಸಾಚಾರಕ್ಕೆ ಬಿಜೆಪಿಯ ಪಿತೂರಿ ಕಾರಣ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಸೋಮವಾರ ಆರೋಪಿಸಿದ್ದಾರೆ.
ಕಿಡಿಗೇಡಿಗಳು ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲೂ ಕೆಂಪುಕೋಟೆ ತಲುಪಿದ್ದು ಹೇಗೆ ಎಂಬುದು ಇಲ್ಲಿರುವ ಮುಖ್ಯ ಪ್ರಶ್ನೆಯಾಗಿದೆ. ಜನವರಿ 26ರಂದು ರಾಷ್ಟ್ರೀಯ ರಾಜಧಾನಿಯಲ್ಲಿ ಅತ್ಯಂತ ಗರಿಷ್ಠ ಭದ್ರತಾ ವ್ಯವಸ್ಥೆ ಇರುತ್ತದೆ. ಹಾಗಿರುವಾಗ ಅಂತಹ ಘಟನೆ ನಡೆಯಲು ಹೇಗೆ ಸಾಧ್ಯ? ಇದು ಸರಕಾರ ವ್ಯವಸ್ಥೆ ಮಾಡಿದ ಘಟನೆ ಎಂಬ ಬಗ್ಗೆ ಅನುಮಾನವಿಲ್ಲ. ಬಿಜೆಪಿಯವರು ರೈತರಂತೆ ನಟಿಸಿ ಟ್ರ್ಯಾಕ್ಟರ್ ರ್ಯಾಲಿಗೆ ನುಗ್ಗಿದ್ದಾರೆ ಮತ್ತು ಹಿಂಸಾಚಾರ ನಡೆಸಿದ್ದಾರೆ ಎಂದವರು ಆರೋಪಿಸಿದ್ದಾರೆ.
Next Story





