Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಏನಿದು ಕಾರ್ಪಲ್ ಟನೆಲ್ ಸಿಂಡ್ರೋಮ್?

ಏನಿದು ಕಾರ್ಪಲ್ ಟನೆಲ್ ಸಿಂಡ್ರೋಮ್?

ವಾರ್ತಾಭಾರತಿವಾರ್ತಾಭಾರತಿ9 Feb 2021 6:22 PM IST
share
ಏನಿದು ಕಾರ್ಪಲ್ ಟನೆಲ್ ಸಿಂಡ್ರೋಮ್?

ಕಾರ್ಪಲ್ ಟನೆಲ್ ಸಿಂಡ್ರೋಮ್ ನಮ್ಮ ಕೈಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಲ್ಲೊಂದಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಕೈ ಮತ್ತು ಮಣಿಗಂಟಿನಲ್ಲಿ ನೋವು,ಮರಗಟ್ಟುವಿಕೆ ಮತ್ತು ನಿಶ್ಶಕ್ತಿ ಕಾಣಿಸಿಕೊಳ್ಳಬಹುದು.

ಕಾರ್ಪಲ್ ಟನೆಲ್ ಎನ್ನುವುದು ಮಣಿಗಂಟಿನಲ್ಲಿರುವ ಕಿರಿದಾದ ಕೊಳವೆಯಾಗಿದ್ದು ಕೈಯಲ್ಲಿರುವ ಮಧ್ಯ ನರ ಮತ್ತು ಸ್ನಾಯುರಜ್ಜುಗಳನ್ನು ಮುಂಗೈಯೊಂದಿಗೆ ಜೋಡಿಸಲು ನೆರವಾಗುತ್ತದೆ. ಕಾರ್ಪಲ್ ಟನೆಲ್ ಸಿಂಡ್ರೋಮ್ ಅನ್ನು ಮಧ್ಯ ನರ ಸಂಕೋಚನ ಎಂದೂ ಕರೆಯಲಾಗುತ್ತದೆ ಮತ್ತು ನಿಮ್ಮ ಕೈಯಲ್ಲಿ ಮರಗಟ್ಟುವಿಕೆ,ಜುಮುಗುಡುವಿಕೆ ಮತ್ತು ನಿಶ್ಶಕ್ತಿ ಅನುಭವವಾದರೆ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗುತ್ತದೆ. ಮಣಿಗಂಟಿನ ಮೂಲಕ ಹಾದುಹೋಗುವ ಮಧ್ಯ ನರವು ಹೆಬ್ಬೆರಳಿನ ಚಲನವಲನ ಮತ್ತು ಸಂವೇದನೆ ಹಾಗೂ ಕಿರಿಬೆರಳನ್ನು ಹೊರತುಪಡಿಸಿ ಇತರ ಎಲ್ಲ ಬೆರಳುಗಳ ಚಲನವಲನಗಳನ್ನು ನಿಯಂತ್ರಿಸುತ್ತದೆ. ಈ ನರದ ಮೇಲೆ ಒತ್ತಡವುಂಟಾದಾಗ ಕಾರ್ಪಲ್ ಟನೆಲ್ ಸಿಂಡ್ರೋಮ್ ಉಂಟಾಗುತ್ತದೆ.

ಲಕ್ಷಣಗಳು

 ಉರಿ,ಮರಗಟ್ಟುವಿಕೆ,ಏನನ್ನಾದರೂ ಹಿಡಿದುಕೊಳ್ಳಲು ಕಷ್ಟವಾಗುವುದು,ತುರಿಕೆ,ಕೈಗಳಲ್ಲಿ ನಿಶ್ಶಕ್ತಿ,ಸುಲಭವಾಗಿ ಕೈಯನ್ನು ಚಲಿಸಲು ಸಾಧ್ಯವಾಗದಿರುವುದು,ಜುಮ್ಮೆನ್ನುವ ಅನುಭವ ಇತ್ಯಾದಿಗಳು ಕಾರ್ಪಲ್ ಟನೆಲ್ ಸಿಂಡ್ರೋಮ್‌ನ ಲಕ್ಷಣಗಳಾಗಿವೆ. ಹೆಚ್ಚಿನ ಪ್ರಕರಣಗಳಲ್ಲಿ ಲಕ್ಷಣಗಳು ಕ್ರಮೇಣ ಮತ್ತು ಯಾವುದೇ ನಿರ್ದಿಷ್ಟ ಗಾಯವಿಲ್ಲದೆ ಆರಂಭಗೊಳ್ಳುತ್ತವೆ. ಹೆಚ್ಚಿನ ರೋಗಿಗಳಲ್ಲಿ ಮೊದಲ ಲಕ್ಷಣಗಳು ಅಪರೂಪವಾಗಿ ಗೋಚರಿಸುತ್ತವೆ. ಆದರೆ ಸ್ಥಿತಿ ಹೆಚ್ಚೆಚ್ಚು ಉಲ್ಬಣಗೊಳ್ಳುತ್ತಾ ಹೋದಂತೆ ಲಕ್ಷಣಗಳು ಆಗಾಗ್ಗೆ ಪ್ರಕಟಗೊಳ್ಳುತ್ತವೆ ಮತ್ತು ಸುದೀರ್ಘ ಅವಧಿಯವರೆಗೆ ಉಳಿದುಕೊಳ್ಳಬಹುದು. ಹೆಚ್ಚಿನ ಜನರು ನಿದ್ರಿಸುವಾಗ ಮಣಿಗಂಟು ಬಗ್ಗಿದ ಸ್ಥಿತಿಯಲ್ಲಿರುವುದರಿಂದ ರಾತ್ರಿ ಸಮಯದಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವುದು ಅತ್ಯಂತ ಸಾಮಾನ್ಯವಾಗಿದೆ ಮತ್ತು ನಿದ್ರೆಗೆ ತೊಂದರೆಯನ್ನುಂಟು ಮಾಡುತ್ತವೆ. ಆದರೆ ಹಗಲಿನಲ್ಲಿ ಏನಾದರೂ ವಸ್ತುವನ್ನು ತುಂಬಾ ಸಮಯ ಕೈಯಲ್ಲಿ ಹಿಡಿದುಕೊಂಡಿದ್ದರೆ ಮತ್ತು ಮಣಿಗಂಟನ್ನು ಪದೇ ಪದೇ ಹಿಂದಕ್ಕೆ ಅಥವಾ ಮುಂದಕ್ಕೆ ಬಗ್ಗಿಸುತ್ತಿದ್ದರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕಾರಣಗಳು

ಆನುವಂಶಿಕತೆ: ಕಾರ್ಪಲ್ ಟನೆಲ್ ಸಿಂಡ್ರೋಮ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಆನುವಂಶಿಕತೆ ಕಾರಣವಾಗಿರುತ್ತದೆ. ಕಾರ್ಪಲ್ ಟನೆಲ್‌ನ ವಿಶಿಷ್ಟತೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ ಮತ್ತು ಕೆಲವರಲ್ಲಿ ಅದು ಸಣ್ಣ ಗಾತ್ರದಲ್ಲಿರಬಹುದು.

ಗರ್ಭಧಾರಣೆ: ಗರ್ಭಧಾರಣೆಯು ಕಾರ್ಪಲ್ ಟನೆಲ್ ಸಿಂಡ್ರೋಮ್‌ಗೆ ಇನ್ನೊಂದು ಕಾರಣವಾಗಿದೆ. ಗರ್ಭಿಣಿಯರಲ್ಲಿ ಹಲವಾರು ಹಾರ್ಮೋನ್ ಬದಲಾವಣೆಗಳು ಆಗುತ್ತಿರುತ್ತವೆ ಮತ್ತು ಇವು ಕೈಕಾಲುಗಳಲ್ಲಿ ಊತವನ್ನುಂಟು ಮಾಡಬಲ್ಲವು.

ಪದೇ ಪದೇ ಕೈಗಳ ಚಲನೆ: ಟೈಪಿಂಗ್ ಅಥವಾ ಮಣಿಗಂಟಿನ ಪದೇಪದೇ ಚಲನವಲನಗಳಾಗುವ ಕೆಲಸ ಕೂಡ ಕಾರ್ಪಲ್ ಟನೆಲ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ. ಒಂದೇ ಕೈಯನ್ನು ಮತ್ತು ಮಣಿಗಂಟನ್ನು ಪದೇ ಪದೇ ಚಲಿಸುತ್ತಿದ್ದರೆ ದೀರ್ಘಾವಧಿಯಲ್ಲಿ ಅದು ಮಣಿಗಂಟಿನ ಸ್ನಾಯುರಜ್ಜುಗಳ ಊತಕ್ಕೆ ಕಾರಣವಾಗುತ್ತದೆ ಮತ್ತು ನರದ ಮೇಲೆ ಹೆಚ್ಚುವರಿ ಒತ್ತಡವುಂಟಾಗುತ್ತದೆ.

ಕೆಲವು ಆರೋಗ್ಯ ಸಮಸ್ಯೆಗಳು: ಕೆಲವೊಮ್ಮೆ ಮಧುಮೇಹ,ರುಮಟಾಯ್ಡ್ ಸಂಧಿವಾತ,ಬೊಜ್ಜು ಮತ್ತು ಥೈರಾಯ್ಡ್ ಗ್ರಂಥಿ ಅಸಮತೋಲನದಂತಹ ಕೆಲವು ಆರೋಗ್ಯ ಸಮಸ್ಯೆಗಳು ಕಾರ್ಪಲ್ ಟನೆಲ್ ಸಿಂಡ್ರೋಮ್‌ಗೆ ಕಾರಣವಾಗುತ್ತವೆ.

ಕಾರ್ಪಲ್ ಟನೆಲ್ ಸಿಂಡ್ರೋಮ್‌ಗೆ ಸೂಕ್ತ ರೋಗನಿರ್ಧಾರ ಮತ್ತು ಚಿಕಿತ್ಸೆ ಅಗತ್ಯವಾಗುತ್ತವೆ. ವೈದ್ಯರು ಅಂಗೈ ತಪಾಸಣೆಯ ಜೊತೆಗೆ ಕಾರ್ಪಲ್ ಟನೆಲ್ ಸಿಂಡ್ರೋಮ್ ಅನ್ನು ಖಚಿತಪಡಿಸಿಕೊಳ್ಳಲು ಕ್ಷ-ಕಿರಣ,ಅಲ್ಟ್ರಾಸೌಂಡ್ ಮತ್ತು ಎಂಆರ್‌ಐ ಪರೀಕ್ಷೆಗಳನ್ನು ನಡೆಸಬಹುದು.

ಕಾರ್ಪಲ್ ಟನೆಲ್ ಸಿಂಡ್ರೋಮ್ ಬಗ್ಗೆ ಸೂಕ್ತ ಕಾಳಜಿ ವಹಿಸದಿದ್ದರೆ ಸ್ಥಿತಿಯು ಹದಗೆಡುತ್ತಲೇ ಹೋಗಬಹುದು. ಹೀಗಾಗಿ ಆರಂಭಿಕ ಹಂತದ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾದರೆ ಕಾಯಿಲೆಯು ಬೆಳೆಯುವ ವೇಗವನ್ನು ತಗ್ಗಿಸಲು ಅಥವಾ ಬೆಳವಣಿಗೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗುತ್ತದೆ ಮತ್ತು ಶಸ್ತ್ರಚಿಕಿತ್ಸೆ ಅಗತ್ಯವಾಗದಿರಬಹುದು.

ಯಾರಲ್ಲಿಯೂ ಈ ಸಮಸ್ಯೆಯು ಕಾಣಿಸಿಕೊಳ್ಳಬಹುದು,ಆದರೆ 20ರ ಪ್ರಾಯದ ಆಸುಪಾಸಿನಲ್ಲಿರುವವರು ತುಂಬಾ ಅಪರೂಪವಾಗಿ ಈ ತೊಂದರೆಯನ್ನು ಅನುಭವಿಸುತ್ತಾರೆ. ವ್ಯಕ್ತಿಗೆ ವಯಸ್ಸಾಗುತ್ತ ಹೋದಂತೆ ಕಾರ್ಪಲ್ ಟನೆಲ್ ಸಿಂಡ್ರೋಮ್ ಉಂಟಾಗುವ ಅಪಾಯವೂ ಹೆಚ್ಚುತ್ತ ಹೋಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X