Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಒಣಖರ್ಜೂರ ಸೇವನೆಯ ಒಳಿತು-ಕೆಡುಕುಗಳು...

ಒಣಖರ್ಜೂರ ಸೇವನೆಯ ಒಳಿತು-ಕೆಡುಕುಗಳು ಇಲ್ಲಿವೆ

ವಾರ್ತಾಭಾರತಿವಾರ್ತಾಭಾರತಿ9 Feb 2021 7:01 PM IST
share
ಒಣಖರ್ಜೂರ ಸೇವನೆಯ ಒಳಿತು-ಕೆಡುಕುಗಳು ಇಲ್ಲಿವೆ

ಖರ್ಜೂರವನ್ನು ಇಷ್ಟಪಡದವರು ಬಹುಶಃ ಯಾರೂ ಇಲ್ಲ. ಒಣ ಖರ್ಜೂರವನ್ನು ತಯಾರಿಸುವಾಗ ಅದರಲ್ಲಿಯ ನೀರಿನ ಅಂಶವನ್ನು ತೆಗೆಯಲಾಗುತ್ತದೆ,ಇದರಿಂದಾಗಿ ಅದು ಕುಗ್ಗಿದ ರೂಪವನ್ನು ಪಡೆಯುತ್ತದೆ ಮತ್ತು ಗಟ್ಟಿಯಾಗುತ್ತದೆ. ಒಣಖರ್ಜೂರವು ಪೌಷ್ಟಿಕಾಂಶಗಳ ಆಗರವಾಗಿದ್ದು,ಸಾಮಾನ್ಯ ಖರ್ಜೂರಕ್ಕೆ ಹೋಲಿಸಿದರೆ ಹೆಚ್ಚು ನಾರನ್ನು ಒಳಗೊಂಡಿರುತ್ತದೆ ಮತ್ತು ಅಧಿಕ ಸಮಯ ಬಾಳುತ್ತದೆ. ಒಣಖರ್ಜೂರ ಸೇವನೆಯಿಂದ ಹಲವಾರು ವಿಟಾಮಿನ್‌ಗಳು ಮತ್ತು ಖನಿಜಗಳು ನಮ್ಮ ಶರೀರಕ್ಕೆ ದೊರೆಯುತ್ತವೆ.

ಒಣಖರ್ಜೂರದಲ್ಲಿ ಕೊಬ್ಬು ಇರುವುದಿಲ್ಲವಾದ್ದರಿಂದ ಅದು ಆರೋಗ್ಯಕ್ಕೆ ಒಳ್ಳೆಯದು ನಿಜ,ಆದರೆ ಅಧಿಕ ಕ್ಯಾಲೊರಿಗಳು ಮತ್ತು ಸಕ್ಕರೆಯನ್ನು ಒಳಗೊಂಡಿರುತ್ತದೆ. ಹೀಗಾಗಿ ದೇಹತೂಕ ಇಳಿಸಿಕೊಳ್ಳಲು ಬಯಸುವವರು ಒಣಖರ್ಜೂರ ಸೇವನೆಯ ಮೇಲೆ ಮಿತಿ ಹಾಕಿಕೊಳ್ಳಬೇಕು.

ಒಣಖರ್ಜೂರ ಸೇವನೆಯ ಲಾಭಗಳು

* ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಹೃದ್ರೋಗಿಗಳು ಅಥವಾ ಅತಿಯಾಗಿ ಕೊಲೆಸ್ಟ್ರಾಲ್ ಇರುವವರು ಒಣಖರ್ಜೂರವನ್ನು ತಿನ್ನಬಹುದು. ಅದರಲ್ಲಿ ಕೊಬ್ಬು ನಗಣ್ಯ ಪ್ರಮಾಣದಲ್ಲಿರುತ್ತದೆ ಮತ್ತು ಕೊಲೆಸ್ಟ್ರಾಲ್ ಇರುವುದಿಲ್ಲ. ಅದು ಶರೀರದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುವ ಕೆಲಸವನ್ನೂ ಮಾಡುತ್ತದೆ. ಅದರಲ್ಲಿ ಅಧಿಕ ಪೊಟ್ಯಾಷಿಯಂ ಮತ್ತು ಕಡಿಮೆ ಸೋಡಿಯಂ ಇರುವುದರಿಂದ ರಕ್ತದೊತ್ತಡವನ್ನು ನಿರ್ವಹಿಸಲು ಮತ್ತು ರಕ್ತದೊತ್ತಡದಲ್ಲಿ ಏರಿಳಿತಗಳನ್ನು ತಡೆಯಲು ನೆರವಾಗುತ್ತದೆ.

* ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ

ಒಣಖರ್ಜೂರದಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಶರೀರದ ಚಯಾಪಚಯವನ್ನು ಉತ್ತೇಜಿಸುತ್ತವೆ ಮತ್ತು ಜೀರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದರಲ್ಲಿ ಸಮೃದ್ಧವಾಗಿರುವ ನಾರು ಆಹಾರದ ಸೂಕ್ತ ಹೀರುವಿಕೆಗೆ ನೆರವಾಗುತ್ತದೆ ಮತ್ತು ಜೀರ್ಣರಸಗಳನ್ನು ಸ್ರವಿಸುತ್ತದೆ.

* ಮಲಬದ್ಧತೆಯ ನಿವಾರಣೆಗೆ ನೆರವಾಗುತ್ತದೆ

ಆಗಾಗ್ಗೆ ಮಲಬದ್ಧತೆ ಮತ್ತು ಬೇಧಿ ಸಮಸ್ಯೆಯನ್ನು ಎದುರಿಸುತ್ತಿರುವವರು ಅಗತ್ಯವಾಗಿ ಒಣಖರ್ಜೂರವನ್ನು ತಿನ್ನಬೇಕು. ಅದರಲ್ಲಿರುವ ನಾರು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಮಲವಿಸರ್ಜನೆಯನ್ನು ಸುಲಭವಾಗಿಸುತ್ತದೆ. ಒಣಖರ್ಜೂರ ನೈಸರ್ಗಿಕ ವಿರೇಚಕವೂ ಆಗಿದೆ.

* ಮೂಳೆಗಳನ್ನು ಗಟ್ಟಿಯಾಗಿಸುತ್ತದೆ

ಒಣಖರ್ಜೂರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳನ್ನು ಗಟ್ಟಿಯಾಗಿಸಲು ನೆರವಾಗುತ್ತದೆ ಮತ್ತು ಅಸ್ಥಿರಂಧ್ರತೆ,ದಂತಸಮಸ್ಯೆಗಳು ಹಾಗೂ ಸಂಧಿವಾತಕ್ಕೆ ಕಾರಣವಾಗುವ ಮೂಳೆಗಳ ಸವೆತವನ್ನು ತಡೆಯುತ್ತದೆ. ಶರೀರದಲ್ಲಿ ಕ್ಯಾಲ್ಸಿಯಂ ನೆರವನ್ನೂ ಅದು ನಿವಾರಿಸುತ್ತದೆ.

* ಶಕ್ತಿಯನ್ನು ಹೆಚ್ಚಿಸುತ್ತದೆ

ಒಣಖರ್ಜೂರದಲ್ಲಿ ಗ್ಲುಕೋಸ್ ಮತ್ತು ಫ್ರುಕ್ಟೋಸ್ ರೂಪಗಳಲ್ಲಿ ನೈಸರ್ಗಿಕ ಸಕ್ಕರೆಯು ಅಧಿಕ ಪ್ರಮಾಣದಲ್ಲಿರುತ್ತದೆ. ಶಕ್ತಿಗುಂದಿದಂತೆ ಅನಿಸಿದಾಗ ಒಂದೆರಡು ಒಣಖರ್ಜೂರಗಳನ್ನು ತಿಂದರೆ ಶರೀರಕ್ಕೆ ಹೊಸ ಚೈತನ್ಯ ದೊರೆಯುತ್ತದೆ.

* ಚರ್ಮದ ಆರೋಗ್ಯಕ್ಕೆ ಪೂರಕ

ಒಣಖರ್ಜೂರದಲ್ಲಿರುವ ವಿಟಮಿನ್ ಬಿ5 ಚರ್ಮಕ್ಕೆ ಲಾಭದಾಯಕವಾಗಿದೆ. ಇದರ ಸೇವನೆಯು ಫ್ರೀ ರ್ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳೂ ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ. ಒಣಖರ್ಜೂರವು ಚರ್ಮದ ಸ್ವರೂಪವನ್ನು ಉತ್ತಮಗೊಳಿಸಿ,ಅದು ಹೊಳೆಯುವಂತೆ ಮಾಡುತ್ತದೆ.

* ತಲೆಗೂದಲಿಗೂ ಲಾಭದಾಯಕ

ಒಣಖರ್ಜೂರದಲ್ಲಿರುವ ವಿಟಮಿನ್ ಬಿ5 ನೆತ್ತಿಯ ಆರೋಗ್ಯವನ್ನು ಕಾಯ್ದುಕೊಳ್ಳುವ ಮೂಲಕ ಕೂದಲುಗಳು ಬುಡದಿಂದಲೇ ಗಟ್ಟಿಯಾಗಿರುವಂತೆ ಮಾಡುತ್ತದೆ. ಅದು ತಲೆಗೂದಲಿಗೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತದೆ. ಒಣಖರ್ಜೂರ ಸೇವನೆಯ ಅನಾನುಕೂಲಗಳು

*ಅಲರ್ಜಿ

 ಸಲ್‌ಫೈಟ್‌ಗಳಿಗೆ ಅಲರ್ಜಿ ಹೊಂದಿರುವವರು ಒಣಖರ್ಜೂರ ಸೇವನೆಯಿಂದ ಸೌಮ್ಯ ಅಥವಾ ತೀವ್ರ ಅಲರ್ಜಿಗಳಿಗೆ ತುತ್ತಾಗಬಹುದು.

* ಅಧಿಕ ಸಕ್ಕರೆ

ಒಣಖರ್ಜೂರದಲ್ಲಿಯ ಇತರ ಪೌಷ್ಟಿಕಾಂಶಗಳಿಗೆ ಹೋಲಿಸಿದರೆ ಅದರಲ್ಲಿ ಸಕ್ಕರೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆಯು ಇರುತ್ತದೆ,ಆದರೆ ಒಣಗಿಸಿದ ಬಳಿಕ ಅದು ಇನ್ನಷ್ಟು ಸಿಹಿಯಾಗುತ್ತದೆ. ಹೆಚ್ಚಿನ ಸಕ್ಕರೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಧುಮೇಹಿಗಳು ಒಣಖರ್ಜೂರವನ್ನು ಸೇವಿಸುವಾಗ ತುಂಬ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

 * ಹೆಚ್ಚಿನ ಕ್ಯಾಲೊರಿಗಳು

ಒಣಖರ್ಜೂರದಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲೊರಿಗಳು ಇರುತ್ತವೆ ಮತ್ತು ಇದು ದೇಹತೂಕವನ್ನು ಇಳಿಸಿಕೊಳ್ಳಲು ಕಸರತ್ತುಗಳನ್ನು ಮಾಡುವವರಿಗೆ ಸೂಕ್ತವಲ್ಲ. ಸಕ್ಕರೆ ಮತ್ತು ಕ್ಯಾಲೊರಿಗಳಿಗೆ ಸಂಬಂಧಿಸಿ ಹೇಳುವುದಾದರೆ ಒಣಖರ್ಜೂರದ ಸೇವನೆಗಿಂತ ಸಾಮಾನ್ಯ ಖರ್ಜೂರದ ಸೇವನೆಯೇ ಒಳ್ಳೆಯದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X