ಪಡುಬಿದ್ರಿ: ಸ್ಥಳೀಯರಿಗೆ ಉದ್ಯೋಗ ನೀಡಲು ಆಗ್ರಹಿಸಿ ಮನವಿ

ಪಡುಬಿದ್ರಿ: ಹೊಸದಾಗಿ ಆರಂಭಗೊಳ್ಳಲಿರುವ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ನೀಡುವಂತೆ ಆಗ್ರಹಿಸಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಸ್ಥಳೀಯರು ಮಂಗಳವಾರ ಮನವಿ ಸಲ್ಲಿಸಿದರು.
ಪಡುಬಿದ್ರಿ ಗ್ರಾಮ ಪಂಚಾಯಿತಿಯ ನಡ್ಸಾಲು ಗ್ರಾಮದ ಕಂಚಿನಡ್ಕದಲ್ಲಿ ಅರುಣಾ ಮಸಾಲ ಎಂಬ ಸಂಸ್ಥೆಯು ಆರಂಭಗೊಳ್ಳಲಿದೆ. ಈ ಜಾಗದಲ್ಲಿ ಈ ಹಿಂದೆ ಗೇರು ಬೀಜ ಸಂಸ್ಥೆಯು ಕಾರ್ಯಾಚರಿಸುತಿತ್ತು. ಇದರಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿತ್ತು. ಈ ವೇಳೆ ನಮ್ಮನ್ನು ರಜೆಯಲ್ಲಿ ಕಳುಹಿಸಿದ್ದು, ಫ್ಯಾಕ್ಟರಿಯನ್ನು ಮುಚ್ಚಲಾಗಿತ್ತು. ಇದೀಗ ನಾವು ಉದೋಗವಿಲ್ಲದೆ ನಿರುದ್ಯೋಗಿಗಳಾಗಿದ್ದೇವೆ. ಈ ನಿಟ್ಟಿನಲ್ಲಿ ಹೊಸದಾಗಿ ಆರಂಭವಾಗಿರುವ ಅರುಣಾ ಮಸಾಲ ಎಂಬ ಸಂಸ್ಥೆಯಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಪ್ರಾಶಸ್ತ್ಯ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ಪಿಡಿಓ ಪಂಚಾಕ್ಷರಿ ಕೇರಿಮಠ ಇವರಿಗೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಅವರು ಈ ಬಗ್ಗೆ ಕಂಪೆನಿಯ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಎಂ.ಎಸ್. ಶಫಿ, ಜ್ಯೋತಿ ಮೆನನ್, ಕರ್ನಾಟಕ ರಕ್ಷಣಾ ವೇದಿಕೆಯ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ನಿಝಾಮುದ್ದೀನ್, ಸವಿತಾ, ಯೋಗಿಣಿ, ಜಯಂತಿ ಉಪಸ್ಥಿತರಿದ್ದರು.





