ಬಿಡುಗಡೆಯಾದ ಬಳಿಕ ಮುನವ್ವರ್ ಫಾರೂಕಿ ಮಾಡಿದ ಪೋಸ್ಟ್ ವೈರಲ್

ಭೋಪಾಲ್, ಫೆ.9: ಹಿಂದು ದೇವತೆಗಳ ಬಗ್ಗೆ ಅಪಹಾಸ್ಯ ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ಕಾಮಿಡಿಯನ್ ಮುನವ್ವರ್ ಫಾರೂಕಿ 35 ದಿನದ ಸೆರೆವಾಸದ ಬಳಿಕ ಜೈಲಿನಿಂದ ಬಿಡುಗಡೆಯಾದ ಬಳಿಕ ಸೆಲ್ಫೀ ಫೋಟೊದ ಜೊತೆ ಕವನವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರುಗೊಳಿಸಿದ ಬಳಿಕ ಶನಿವಾರ ರಾತ್ರಿ ಇಂದೋರ್‌ನ ಸೆಂಟ್ರಲ್ ಜೈಲಿನಿಂದ ಫಾರೂಕಿ ಬಿಡುಗಡೆ ಹೊಂದಿದ್ದಾರೆ. ಬಿಡುಗಡೆಗೊಂಡ ಬಳಿಕ ಖುಷಿಯಿಂದ ನಗು ಚೆಲ್ಲುವ ಸೆಲ್ಫೀ ಫೋಟೊದ ಜೊತೆ ‘ನನ್ನೊಳಗಿನ ಅಂಧಕಾರ ದೂರು ನೀಡಲಿ ಬಿಡಿ, ನಾನು ಲಕ್ಷಾಂತರ ಮುಖಗಳನ್ನು ನಗಿಸುವ ಮೂಲಕ ಬೆಳಗಿಸಿದ್ದೇನೆ’ ಎಂಬ ಕವನದ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು 14 ಗಂಟೆಯಲ್ಲೇ ಲಕ್ಷಾಂತರ ಲೈಕ್‌ಗಳನ್ನು ಹಾಗೂ 10,000ಕ್ಕೂ ಹೆಚ್ಚು ಕಮೆಂಟ್ಸ್‌ಗಳನ್ನು ಗಳಿಸಿದೆ.
Next Story







