ನಾಗರಿಕ ಬಂದೂಕು ತರಬೇತಿ ಶಿಬಿರ
ಉಡುಪಿ, ಫೆ.10: ಜಿಲ್ಲಾ ಪೊಲೀಸ್ ಘಟಕದ ವತಿಯಿಂದ 2021ನೆ ಸಾಲಿನ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ನಡೆಸಲು ಉದ್ದೇಶಿಸಲಾಗಿದೆ.
ನಾಗರಿಕ ಬಂದೂಕು ತರಬೇತಿಯ ಅರ್ಜಿ ನಮೂನೆಗಳು ಫೆ.11ರಿಂದ ಉಡುಪಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮತ್ತು ಡಿಎಆರ್ ಪೊಲೀಸ್ ಕೇಂದ್ರಸ್ಥಾನದಲ್ಲಿ ಲಭ್ಯವಿರುತ್ತದೆ. ಉಡುಪಿ ಜಿಲ್ಲೆಗೆ ಸಂಬಂಧಿಸಿದ ಆಸಕ್ತ ನಾಗರಿಕರು ಅರ್ಜಿ ನಮೂನೆಗಳನ್ನು ಆಯಾಯ ಪೊಲೀಸ್ ಠಾಣೆ/ ಡಿಎಆರ್ ಕೇಂದ್ರಸ್ಥಾನದಿಂದ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಸದ್ರಿ ಠಾಣೆ/ಡಿಎಆರ್ ಕೇಂದ್ರಸ್ಥಾಕ್ಕೆ ಫೆ.14ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಉಪಾಧೀಕ್ಷಕರು(ಸಶಸ್ತ್ರ)ರವರ ಕಛೇರಿ ಉಡುಪಿ(ದೂ.ಸಂ.: 0820-2521111,ಮೊ-9480805406), ಪೊಲೀಸ್ ನಿರೀಕ್ಷಕರ(ಸಶಸ್ತ್ರ) ರವರ ಕಛೇರಿ ಉಡುಪಿ(ದೂ.ಸಂ.: 0820-2523444, ಮೊ- 88843 76743) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story





