ಉಡುಪಿ: ಎಸೆಸೆಲ್ಸಿ ಹಿಂದಿ ವಿಷಯದ ಕುರಿತು ಫೋನ್ ಇನ್ ಕಾರ್ಯಕ್ರಮ
ಉಡುಪಿ, ಫೆ.10: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಹಿಂದಿ ವಿಷಯದ ಕುರಿತು ಪೋನ್ ಇನ್ ಕಾರ್ಯಕ್ರಮ ಫೆ.12ರಂದು ಸಂಜೆ 5ರಿಂದ ರಾತ್ರಿ 7ರವರೆಗೆ ಬೈಂದೂರು ಕಂಬದಕೋಣೆ ಸಾಂದೀಪನೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಥಿಗಳು ಹಿಂದಿ ಭಾಷೆ ವಿಷಯದ ಕಲಿಕಾ ಸಮಸ್ಯೆಗಳ ಬಗ್ಗೆ ಗೋಪಾಲ ಮೊಗೇರ ಮೊ.ನಂ:9844663347, ರವೀಂದ್ರ ಪಿ ಮೊ.ನಂ:7019492679, ಧಮೇಂದ್ರ ಹಳೇಮಠ್ ಮೊ.ನಂ: 9448679151, ವಿನೋದ್ ಚವ್ಹಾಣ್ ಮೊ.ನಂ: 7019953395, ರಜನಿ ಮೊ.ನಂ: 8660278320, ವರ್ಷ ಮೊ.ನಂ: 7899705422 ಹಾಗೂ ಪರೀಕ್ಷಾ ಸಿದ್ಧತೆ, ಮತ್ತಿತರ ಪ್ರಶ್ನೆಗಳಿಗೆ ಡಿಡಿಪಿಐ ಎನ್.ಎಚ್. ನಾಗೂರ ಮೊ.ನಂ: 9448999353 ಇವರಿಗೆ ಕರೆ ಮಾಡಿ ಪ್ರಶ್ನೆ ಕೇಳಿ ಪರಿಹಾರ ಪಡೆಯಬಹುದು.
ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರೂ ಸಹ ಕರೆ ಮಾಡಿ ಪರೀಕ್ಷಾ ಸಿದ್ಧತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳ ಕುರಿತು ಡಿಡಿಪಿಐ ನಂಬರ್‌ಗೆ ಕರೆ ಮಾಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.





