ವಿದ್ಯುತ್ ಕಳ್ಳತನ ಪ್ರಕರಣ: 70 ವರ್ಷದ ವ್ಯಕ್ತಿಗೆ ಜೈಲು, 19 ಲಕ್ಷ ರೂ.ದಂಡ ವಿಧಿಸಿದ ನ್ಯಾಯಾಲಯ

ಥಾಣೆ: 2008ರಲ್ಲಿ ನಡೆದಿದ್ದ ವಿದ್ಯುತ್ ಕಳ್ಳತನದ ಪ್ರಕರಣದಲ್ಲಿ ಮಹಾರಾಷ್ಟ್ರದ ಥಾಣೆಯ ಜಿಲ್ಲಾ ನ್ಯಾಯಾಲಯವು 70 ವರ್ಷದ ವ್ಯಕ್ತಿಯೊಬ್ಬನಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 19 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
ಜಿಲ್ಲಾ ನ್ಯಾಯಾಧೀಶ ಪಿ.ಪಿ. ಜಾಧವ್ ಅವರು ತಮ್ಮ ಆದೇಶದಲ್ಲಿ 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗೆ ಮೊನುದ್ದೀನ್ ಮೆಹಬೂಬ್ ಶೇಖ್ ನನ್ನು ತಪ್ಪಿತಸ್ಥನೆಂದು ಪರಿಗಣಿಸಿದರು. ನ್ಯಾಯಾಲಯದ ಆದೇಶ ಫೆಬ್ರವರಿ 6ರಂದು ಅಂಗೀಕರಿಸಲಾಗಿದ್ದು, ಫೆಬ್ರವರಿ 9ರಂದು ಆದೇಶ ಲಭ್ಯವಾಗಿದೆ.
ಶೇಖ್ ವಿದ್ಯುತ್ ಚಾಲಿತ ಮಗ್ಗದ ಕಾರ್ಖಾನೆಯ ಉದ್ಯೋಗಿಯಾಗಿದ್ದು, ಅಲ್ಲಿ ತಪಾಸಣೆಯ ವೇಳೆ ವಿದ್ಯುತ್ ಕಳ್ಳತನ ಪತ್ತೆಯಾಗಿತ್ತು. ಶೇಖ್ ಈ ಅಪರಾಧದಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂದು ಪ್ರಾಸಿಕ್ಯೂಶನ್ ತಿಳಿಸಿದೆ.
Next Story





