ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದ ಅಂಧ ಮಹಿಳೆ

ಬಾಗೇಪಲ್ಲಿ, ಫೆ.10: ತಾಲೂಕಿನ ಗೂಳೂರು ಹೋಬಳಿ ಕೊತ್ತಕೋಟೆ ಗ್ರಾಪಂ ಅಧ್ಯಕ್ಷೆಯಾಗಿ ಲಕ್ಷ್ಮಿದೇವಮ್ಮ ಮತ್ತು ಉಪಾಧ್ಯಕ್ಷೆಯಾಗಿ ಕುಮಾರಿ ಈಶ್ವರರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎ.ಮೋಹನ್ ತಿಳಿಸಿದ್ದಾರೆ
ಗ್ರಾಪಂನಲ್ಲಿ 13 ಜನ ಸದಸ್ಯರಿದ್ದು ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಿದೇವಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕುಮಾರಿ ಈಶ್ವರರೆಡ್ಡಿ ಅವರು ಏಕೈಕ ನಾಮಪತ್ರಗಳನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಡೀ ಗ್ರಾಪಂ ಪೈಕಿ ಏಕೈಕ ಪರಿಶಿಷ್ಟ ಜಾತಿ ಮಹಿಳೆ ಅಭ್ಯರ್ಥಿ ಇರುವುದರಿಂದ ಅಧ್ಯಕ್ಷರಾಗಿದ್ದಾರೆ. ಅದರಲ್ಲೂ ಲಕ್ಷ್ಮಿದೇವಮ್ಮ ಅಂಧ ಮಹಿಳೆಯಾಗಿರುವುದು ವಿಶೇಷ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಅಂಧ ಮಹಿಳೆಯಾಗಿದ್ದರೂ ನನ್ನ ಮಗನ ಸಹಕಾರದಿಂದ ಆಡಳಿತ ನಡೆಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಎಸ್.ಎ.ಮೋಹನ್ ಮತ್ತು ಸಹಾಯಕ ಚುನಾವಣಾಧಿಕಾರಿ ಡಾ.ಜಯಶಂಕರ್, ಪಿಡಿಒ ಕೆ.ಬಾಬು ಸಾಹೇಬ್ ಕರ್ತವ್ಯ ನಿರ್ವಹಿಸಿದರು.
ಸಭೆಯಲ್ಲಿ ಸದಸ್ಯರಾದ ವೆಂಕಟರವಣಮ್ಮ, ಗಂಗಿರೆಡ್ಡಿ, ಶ್ರೀನಿವಾಸ, ನಿರ್ಮಲಮ್ಮ, ರವೀಂದ್ರಬಾಬು, ಉಮಾದೇವಿ, ವೆಂಕಟಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ರಾಮನಾಥ, ಈಶ್ವರರೆಡ್ಡಿ, ಆದಿನಾರಾಯಣ, ಬಾಲು, ಜೆ.ಪಿ.ರೆಡ್ಡಿ, ಸುಧಾಕರರೆಡ್ಡಿ,ರವಿ, ನರಸಿಂಹಮೂರ್ತಿ ಯರ್ರಬಲ್ಲಿ, ಲಕ್ಷ್ಮಯ್ಯ, ವೆಂಕಟರಾಮ ಆನಂದ ರವೀಂದ್ರಬಾಬು, ರಾಮಮೋಹನ್, ಚಿನ್ನನಾಗಪ್ಪ, ಶ್ರೀನಿವಾಸಗೌಡ, ಲಕ್ಷ್ಮಣ್ ರೆಡ್ಡಿ, ಈಶ್ವರಪ್ಪ ಶ್ರೀನಿವಾಸ ಖಲೀಲ್ ಸಾಬ್ ಮತ್ತಿತರರು ಹಾಜರಿದ್ದರು.







