ಅಡ್ಯಾರ್ ಪದವು : ರಾಜೇಶ್ವರ್ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘ ರಚನೆ

ಅಬ್ದುಲ್ ಹಮಿದ್, ಹ್ಯೂಬರ್ಟ್, ಕೀರ್ತನ್
ಅಡ್ಯಾರ್ ಪದವು : ಹಳೆ ವಿದ್ಯಾರ್ಥಿಗಳು ಶಾಲೆಯ ಶಕ್ತಿಯಾಗಿ, ಆತ್ಮಸ್ಥೈರ್ಯವನ್ನು ತುಂಬುವ ಮತ್ತು ಶಾಲೆಯನ್ನು ಉಳಿಸುವ ಉದ್ದೇಶದಿಂದ ನೀರುಮಾರ್ಗ ಅಡ್ಯಾರ್ ಪದವು ರಾಜೇಶ್ವರ್ ಹೈಸ್ಕೂಲ್ ಸಂಸ್ಥೆಯ ಹಳೆವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಿ ‘ರಾಜೇಶ್ವರ್ ಹೈಸ್ಕೂಲು ಹಳೆ ವಿದ್ಯಾರ್ಥಿ ಸಂಘ’ವನ್ನು ರಚಿಸಲಾಯಿತ್ತು.
ಅಧ್ಯಕ್ಷರಾಗಿ ಡಿ. ಅಬ್ದುಲ್ ಹಮಿದ್ ಕಣ್ಣೂರು, ಉಪಾಧ್ಯಕ್ಷರಾಗಿ ಸಂತೋಷ್ ಡಿ ಕೋಸ್ತ, ಕೀರ್ತನ್ ರಾಜ್ ಶೆಟ್ಟಿ, ಮೋಹಿನಿ, ಪ್ರ. ಕಾರ್ಯದರ್ಶಿಯಾಗಿ ಕೀರ್ತಿ ರಾಜ್ ಪಡು, ಜೊತೆ ಕಾರ್ಯದರ್ಶಿಯಾಗಿ ರಸಿಕ, ಪ್ರದೀಪ್ ಮಿಸ್ಕಿತ್, ಕೋಶಾಧಿಕಾರಿಯಾಗಿ ಹ್ಯೂಬರ್ಟ್ ಡಿ ಸೋಜ, ಗೌರವ ಸಲಹೆಗಾರರು ಮಹಾಬಲ ಕುಲಾಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಸಲೀಂ, ಆಲ್ವಿನ್ ಕ್ರಾಸ್ತಾ, ಶಶಿ ಕುಮಾರ್, ಅಬ್ಬುಲ್ ರಹ್ಮಾನ್, ವಿ.ಜೆ ಡಿಕ್ಷನ್, ವಿಜಯ ಕೋಟ್ಯಾನ್, ರೇಷ್ಮಾ ಪಿರೇರಾ, ಸತೀಶ ಇವರನ್ನು ಆಯ್ಕೆಮಾಡಲಾಯಿತು
Next Story





