ದೇಶಿಯ ವಿಮಾನಯಾನ ದರಗಳಲ್ಲಿ 30 ಶೇ. ಏರಿಕೆ ಮಾಡಿದ ಸರಕಾರ

ಹೊಸದಿಲ್ಲಿ,ಫೆ.11: ಇನ್ನು ಮುಂದೆ ದೇಶದೊಳಗೆ ವಿಮಾನ ಪ್ರಯಾಣ ವೆಚ್ಚವು ಶೇ.30ರವರೆಗೆ ದುಬಾರಿಯಾಗಲಿದೆ. ವಿವಿಧ ಮಾರ್ಗಗಳಲ್ಲಿ ಕನಿಷ್ಠ ಮತ್ತು ಗರಿಷ್ಠ ವಿಮಾನ ಪ್ರಯಾಣದರಗಳನ್ನು ಸರಕಾರವು ಹೆಚ್ಚಿಸಿದೆ. ಇದೇ ವೇಳೆ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಗಳ ಮೇಲಿನ ಶೇ.80ರ ಮಿತಿಯು ಮಾರ್ಚ್ 31ರವರೆಗೆ ಮುಂದುವರಿಯಲಿದೆ. ಕನಿಷ್ಠ ಪ್ರಯಾಣದರವನ್ನು ಶೇ.10ರಷ್ಟು ಮತ್ತು ಗರಿಷ್ಠ ಪ್ರಯಾಣದರವನ್ನು ಶೇ.30ರಷ್ಟು ಹೆಚ್ಚಿಸಲಾಗಿದೆ.
ಉದಾಹರಣೆಗೆ ದಿಲ್ಲಿ-ಮುಂಬೈ ನಡುವಿನ ಪ್ರಯಾಣದರವು ಮೊದಲಿನ 3,500-10,000 ರೂ.ಗಳಿಂದ 3,900-13,000 ರೂ.ಗೆ ಹೆಚ್ಚಲಿದೆ. ಇವು ಏಕಮಾರ್ಗ ಪ್ರಯಾಣದ ಇಕಾನಮಿ ಟಿಕೆಟ್ ದರಗಳಾಗಿದ್ದು, ವಿಮಾನ ನಿಲ್ದಾಣಗಳ ಅಭಿವೃದ್ಧಿ ಶುಲ್ಕ, ಪ್ರಯಾಣಿಕರ ಸುರಕ್ಷತಾ ಶುಲ್ಕ (ದೇಶಿಯ ಪ್ರಯಾಣಕ್ಕೆ 150 ರೂ.) ಮತ್ತು ಜಿಎಸ್‌ಟಿಯನ್ನು ಒಳಗೊಂಡಿರುವುದಿಲ್ಲ ಎಂದು ಸರಕಾರ ತಿಳಿಸಿದೆ.
Next Story





