ಫೆ.14: ಆಯುಷ್ಮಾನ್ ಕಾರ್ಡ್ ಉಚಿತ ವಿತರಣೆ
ಮಂಗಳೂರು, ಫೆ.11: ವಿಶ್ವ ಬೆಳಕು ಸೌಹಾರ್ದ ಸಹಕಾರಿ ನಿಯುತ ಇದರ ವತಿಯಿಂದ ಆರೋಗ್ಯ ಕರ್ನಾಟಕ ಆಯುಷ್ಮಾನ್ ಉಚಿತ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವು ಫೆ.14ರಂದು ಬೆಳಗ್ಗೆ 9ರಿಂದ ಅಪರಾಹ್ನ 3ರವರೆಗೆ ಕೊಟ್ಟಾರ ಚೌಕಿಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ನಡೆಯಲಿದೆ.
ಲಯನ್ಸ್ ಕ್ಲಬ್ ಮಂಗಳೂರು, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಕರ್ನಾಟಕ ಒನ್ ಜಂಟಿಯಾಗಿ ನಡೆಸುವ ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಉಚಿತ ಕಾರ್ಡ್ ಪಡೆಯುವ ಬಿಪಿಎಲ್ ಕಾರ್ಡ್‌ನವರು ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ನವರು ಆಧಾರ್ ಕಾರ್ಡ್ ತರಬೇಕು ಎಂದು ಪ್ರಕಟನೆ ತಿಳಿಸಿದೆ.
Next Story





