ಉಡುಪಿ: ಶೇ.37 ಫ್ರಂಟ್‌ಲೈನ್ ಕಾರ್ಯಕರ್ತರಿಗೆ ಲಸಿಕೆ
ಉಡುಪಿ, ಫೆ.11: ಕೊರೋನ ಸೋಂಕಿನ ವಿರುದ್ಧ ಬಂದಿರುವ ಕೋವಿಶೀಲ್ಡ್ ಲಸಿಕೆಯನ್ನು ಈವರೆಗೆ ಶೇ.37ರಷ್ಟು ಉಡುಪಿ ಜಿಲ್ಲೆಯ ಫ್ರಂಟ್‌ಲೈನ್ ವರ್ಕರ್ಸ್‌ಗಳು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲೆಯಲ್ಲಿ ಒಟ್ಟು 4144 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿ ಇದ್ದು, ದಿನದಲ್ಲಿ 65 ಮಂದಿ ಸೇರಿದಂತೆ ಒಟ್ಟು 1533 ಮಂದಿ ಲಸಿಕೆಯನ್ನು ಸ್ವೀಕರಿ ಸಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.
ಅದೇ ರೀತಿ ಮೊದಲ ಹಂತದ ಲಸಿಕೆಯನ್ನು ಪಡೆಯುತ್ತಿರುವ ಜಿಲ್ಲೆಯ ಆರೋಗ್ಯ ಕಾರ್ಯಕರ್ತರಲ್ಲಿ ಶೇ.59ರಷ್ಟು ಮಂದಿ ಇದುವರೆಗೆ ಲಸಿಕೆ ಪಡೆದಿದ್ದಾರೆ. ಒಟ್ಟು 25,863 ಮಂದಿಗೆ ಲಸಿಕೆ ನೀಡುವ ಗುರಿ ಇದ್ದು, ಇಂದಿನವರೆಗೆ 15,170 ಮಂದಿ ಲಸಿಕೆ ಪಡೆದಿದ್ದಾರೆ ಎಂದೂ ಪ್ರಕಟಣೆ ಹೇಳಿದೆ.
Next Story





