ಯುವಮನಸ್ಸು ದಾರಿತಪ್ಪಲು ಕೌಟುಂಬಿಕ ಅಶಾಂತಿಯೇ ಕಾರಣ : ಅಡ್ವಕೇಟ್ ಹನೀಫ್ ಹುದವಿ

ಪುತ್ತೂರು : ಕುಟುಂಬದಲ್ಲಿ ಆತ್ಮೀಯರಿಂದ ಮಾನಸಿಕ ನೆಮ್ಮದಿ ಲಭ್ಯವಿಲ್ಲದಾಗ ಮಾತ್ರ ನಮ್ಮ ಮಕ್ಕಳು ದಾರಿತಪ್ಪುತ್ತಿರುವುದನ್ನು ಕಾಣಲು ಸಾಧ್ಯ. ಹಾಗಾಗಿ ಹೆತ್ತವರು ತಮ್ಮ ಮಕ್ಕಳೊಂದಿಗೆ ಪ್ರೀತಿಯ ಮಾತುಗಳನ್ನಾಡುವುದರ ಜತೆಗೆ ಉತ್ತಮ ಗುಣನಡತೆಯೊಂದಿಗೆ ಸಂಸ್ಕಾರದ ವಾಹಕರಾಗಬೇಕಿದೆ ಎಂದು ವಾಗ್ಮಿ, ಅಡ್ವಕೇಟ್ ಹನೀಫ್ ಹುದವಿ ಹೇಳಿದರು
ಅವರು ಆತೂರು ಮರ್ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಎಸೋಸಿಯೇಷನ್ ವತಿಯಿಂದ ನಡೆದ 7ನೇ ವರ್ಷದ ಕುಟುಂಬ ಸಮ್ಮಿಲನದಲ್ಲಿ ಮಾತನಾಡಿದರು.
ಆತೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಕೆ ಎಂ ಎಚ್ ಫಾಝಿಲ್ ಹನೀಫಿ ಅಧ್ಯಯನ ಶಿಬಿರದ ಉದ್ಘಾಟಿಸಿದರು. ಹಫ್ವಾ ಸಮಿತಿಯ ಗೌರವಧ್ಯಕ್ಷರು ಹಾಜಿ ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಆತೂರು ಬದ್ರಿಯಾ ಜುಮಾ ಮಸೀದಿಯ ಮುದರಿಸ್ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಪ್ರಾಥನೆಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಹಾಜಿ ಎ ಎಂ ಅಬೂಬಕ್ಕರ್, ಹೈದರ್ ಕಲಾಯಿ, ಎನ್ ಇಬ್ರಾಹಿಂ ಜೇಡರಪೇಟೆ, ಜೆ ಮೊಹಮ್ಮದ್ ಕುಂಞ, ಹುಸೈನ್ ಸಜ್ಜದ್, ಮೂಸ ಮುಸ್ಲಿಯಾರ್ ಉಪಸ್ಥಿತಿದ್ದರು. ಬಿ ಎಸ್ ಅಬ್ದುಲ್ ಖಾದರ್ ಸ್ವಾಗತ ಮಾಡಿದರು.
ಸಮಾರೂಪ ಸಮಾರಂಭ: ಮರ್ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಎಸೋಸಿಯೇಷನ್ ವತಿಯಿಂದ ನಡೆದ 7ನೇ ವರ್ಷದ ಕುಟುಂಬ ಸಮ್ಮಿಲನದ ಸಮಾರೂಪ ಸಮಾರಂಭ ಮದ್ಯಾಹ್ನ ನಡೆಯಿತು.
ಹಫ್ವಾ ಸಮಿತಿ ಅಧ್ಯಕ್ಷರಾದ ಹಾಜಿ ಎನ್ ಇಬ್ರಾಹಿಂ ಜೇಡರಪೇಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೆಮ್ಮಾರ ಮುಹಿಯುದ್ದೀನ್ ಜುಮಾ ಮಸೀದಿಯ ಮುದರಿಸ್ ಇಲ್ಯಾಸ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಹಂಝ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಮಾರಂಭದಲ್ಲಿ ದ ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್ ಮೊಹಮ್ಮದ್ ಅಲಿ, ಸಾಮಾಜಿಕ ಕಾರ್ಯಕರ್ತ ಹಾಜಿ ಕೆ ರಫೀಕ್ ಮಾಸ್ಟರ್, ಹಫ್ವಾ ದುಬೈ ಸಮಿತಿಯ ಗೌರವಧ್ಯಕ್ಷರು ಅಬೂಬಕ್ಕರ್ ಮದನಿ, ಅಧ್ಯಕ್ಷರಾದ ಎ ಎಸ್ ರಫೀಕ್, ಬೆಂಗಳೂರು ಅಕಾಡೆಮಿಕ್ ಕೋರ್ಡಿನೇಟರ್ ಮುರ್ಕಿನ್ಸ್ ಇದರ ಮುಸ್ತಫಾ ಸಖಾಫಿ ಅಲ್ ಖಾದ್ರಿ, ಹುಬ್ಬಳ್ಳಿ ಅಲ್ ಅಮಾನಿ ಅಲ್ ಖಾಮಿಲ ಚ್ ಎಚ್ ಅಬೂಬಕ್ಕರ್ ಸಿದ್ದೀಕ್, ಅಬೂಬಕ್ಕರ್ ಸಿದ್ದೀಕ್ ಝನಿ ಮುಡಿಪು, ಅಬ್ಬಾಸ್ ಮದನಿ ಆತೂರು, ಎ ಎಂ ಅಬೂಬಕ್ಕರ್, ಉಮರ್ ಪಿಲಿಕುಡೇಲ್ ಉಪಸ್ಥಿತಿದ್ದರು.
ಸಿರಾಜ್ ಬಡ್ಡಮೆ ಸ್ವಾಗತಿಸಿ, ವೈ ಇಬ್ರಾಹಿಂ ವಂದಿಸಿದರು. ನೌಫಾಲ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.







