ಪ್ರಚೋದನಕಾರಿ ಭಾಷಣ ಆರೋಪ : ಶರಣ್ ಪಂಪ್ ವೆಲ್, ಭುಜಂಗ್ ಕುಲಾಲ್, ಶೇಖರಾನಂದ ಸ್ವಾಮಿ ವಿರುದ್ಧ ದೂರು

ಮೂಡುಬಿದಿರೆ : ತೊಕ್ಕೊಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಕೋಮು ದ್ವೇಷ ಹಾಗೂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಶರಣ್ ಪಂಪ್ ವೆಲ್, ಭುಜಂಗ ಕುಲಾಲ್ ಮತ್ತು ಶೇಕರಾನಂದ ಸ್ವಾಮಿ ವಿರುದ್ಧ ದೂರು ನೀಡಲಾಗಿದೆ.
ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಮೂಡುಬಿದಿರೆ ಠಾಣಾಧಿಕಾರಿಗಳಿಗೆ ಭಾಷಣದ ವೀಡಿಯೊ ಸಿ.ಡಿ. ಲಗತ್ತಿಸಲ್ಪಟ್ಟ ದಾಖಲೆಗಳೊಂದಿಗೆ ಎಸ್.ಡಿ.ಪಿ.ಐ ಪುತ್ತಿಗೆ ಗ್ರಾಮಸಮಿತಿ ಸದಸ್ಯರಾದ ಫಿರೋಝ್ ಖಾನ್ ದೂರು ನೀಡಿದರು.
ಈ ಸಂದರ್ಭ ಎಸ್.ಡಿ.ಪಿ.ಐ ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ನಿಸಾರ್ ಮರವೂರು, ಎಸ್.ಡಿ.ಪಿ.ಐ ಮೂಡಬಿದ್ರೆ ವಲಯ ಅಧ್ಯಕ್ಷ ಇಬ್ರಾಹಿಂ ಹಂಡೇಲು, ಅಶ್ರಫ್ ಕೋಟೆಬಾಗಿಲು, ಅನ್ಸಾಫ್, ಶೆಹರಾಝ್ ಉಪಸ್ಥಿತರಿದ್ದರು.
Next Story





