ತೆಲಂಗಾಣದ ಮಾನಸಾ ಮಿಸ್ ಇಂಡಿಯಾ ವರ್ಲ್ಡ್
ಮುಂಬೈ, ಫೆ.11: ಮುಂಬೈಯಲ್ಲಿ ಬುಧವಾರ ರಾತ್ರಿ ನಡೆದ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ತೆಲಂಗಾಣದ ಮಾನಸಾ ವಾರಾಣಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ವಿಎಲ್‌ಸಿಸಿ ಫೆಮಿನಾ ಮಿಸ್ ಗ್ರಾಂಡ್ ಇಂಡಿಯಾ 2020 ಕಿರೀಟ ಹರ್ಯಾಣದ ಮಣಿಕಾ ಶೀಕಂಡ್ ಗೆದ್ದುಕೊಂಡರೆ, ಉತ್ತರಪ್ರದೇಶದ ಮಾನ್ಯಾ ಸಿಂಗ್ ವಿಎಲ್‌ಸಿಸಿ ಫೆಮಿನಾ ಮಿಸ್ ಇಂಡಿಯಾ 2020 ರನ್ನರ್ ಅಪ್ ಆಗಿ ಆಯ್ಕೆಯಾದರು. ನಟಿಯರಾದ ನೇಹಾ ಧೂಪಿಯಾ, ಚಿತ್ರಾಂಗದಾ ಸಿಂಗ್, ಪುಲ್ಕಿತ್ ಸಾಮ್ರಾಟ್ ಮತ್ತು ಖ್ಯಾತ ಡಿಸೈನರ್‌ಗಳಾದ ಫಲ್ಗುಣಿ ಹಾಗೂ ಶೇನ್ ಪಿಕಾಕ್ ತೀರ್ಪುಗಾರರ ಮಂಡಳಿಯಲ್ಲಿದ್ದರು.
Next Story





