ಫೆ.14ರಂದು ಉಳ್ಳಾಲ ಹಳೆಕೋಟೆಯಲ್ಲಿ ರಕ್ತದಾನ ಶಿಬಿರ

ಉಳ್ಳಾಲ, ಫೆ.12: ಇಲ್ಲಿನ ಹಳೆಕೋಟೆಯ ಮರ್ಖಲ್ ಇಸ್ಲಾಂ ಮದ್ರಸದ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ರೆಡ್‌ಕ್ರಾಸ್ ಮಂಗಳೂರು ಸಹಭಾಗಿತ್ವದಲ್ಲಿ ಕ್ರಿಯೆಟಿವ್ ಫೌಂಡೇಶನ್ ಮಂಗಳೂರು ಇವರ ಸಹಕಾರದೊಂದಿಗೆ ಫೆ.14ರಂದು ಹಳೆಕೋಟೆ ಸೈಯದ್ ಮದನಿ ಪ್ರೌಢಶಾಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1:30ರವರೆಗೆ ನಡೆಯುವ ಶಿಬಿರದಲ್ಲಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ
ಪ್ರತೀ ರಕ್ತದಾನಿಗೂ ಲಕ್ಕಿ ಕೂಪನ್ ನೀಡಲಾಗುವುದು. ಅದೃಷ್ಟಶಾಲಿ ವಿಜೇತರಿಗೆ ಮೊಬೈಲ್ ಪೋನ್ ಉಡುಗೊರೆಯಾಗಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.: 8660080031, 9901629630, 9035083103 ಹಾಗೂ 9945129611 ಅನ್ನು ಸಂಪರ್ಕಿಸಬಹುದು.
Next Story





