ಪಶ್ಚಿಮಘಟ್ಟದ ಸೌಂದರ್ಯ ಸವಿಯಲು ಬೆಂಗಳೂರು-ಮಂಗಳೂರು ರೈಲಿಗೆ ಗಾಜಿನ ಕಿಟಕಿ, ಛಾವಣಿ

Picture: Twitter.com/PCMohanMP
ಬೆಂಗಳೂರು, ಫೆ.12: ಪಶ್ಚಿಮ ಘಟ್ಟದ ಮೂಲಕ ಹಾದು ಹೋಗುವ ಬೆಂಗಳೂರು-ಮಂಗಳೂರು ರೈಲಿನ ವಿಶೇಷ ಬೋಗಿಗಳಿಗೆ ದೊಡ್ಡಗಾತ್ರದ ಗಾಜಿನ ಕಿಟಕಿ, ಛಾವಣಿ ಅಳವಡಿಸಲಾಗುವುದು. ಆ ಮೂಲಕ ಪ್ರಯಾಣಿಕರಿಗೆ ಪ್ರಕೃತಿ ಸೌಂದರ್ಯವನ್ನು ಸವಿಯಲು ಅವಕಾಶ ಮಾಡಿಕೊಡಲಾಗುವುದು ಎಂದು ಸಂಸದ ಪಿ.ಸಿ.ಮೋಹನ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಾಗುವ ರೈಲಿನಲ್ಲಿ ವಿಶೇಷವಾದ ಬೋಗಿಗಳನ್ನು ಅಳವಡಿಸಲಾಗುತ್ತಿದ್ದು, ಪ್ರಯಾಣಿಕರು 360 ಡಿಗ್ರಿಯಲ್ಲಿ ಸುತ್ತುವ ಕುರ್ಚಿಯಲ್ಲಿ ಕುಳಿತು ಶಿರಾಡಿ ಘಾಟಿನ ಸೌಂದರ್ಯವನ್ನು ಸವಿಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವಿಶೇಷ ರೈಲ್ವೆ ಬೋಗಿಯಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋಓವೆನ್, ಸಣ್ಣ ಫ್ರಿಡ್ಜ್ ಹಾಗೂ ಎಸಿ ಸೌಲಭ್ಯವನ್ನು ಒಳಗೊಂಡಿರುತ್ತದೆ. ಇದರಿಂದ ಪ್ರಯಾಣಿಕರು ಕುಳಿತಲ್ಲಿಯೇ ಅರಣ್ಯ, ಜಲಪಾತ, ವನ್ಯಜೀವಿಗಳನ್ನು ನೋಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





