ಸಾಸ್ತನ: ಬೈಕ್ - ಟೆಂಪೋ ಢಿಕ್ಕಿ; ಬೈಕ್ ಸವಾರನಿಗೆ ಗಂಭೀರ ಗಾಯ

ಕೋಟ: ಫೆ 12 ಸಾಸ್ತನ ಪಾಂಡೇಶ್ವರದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಒಂದು ಟೆಂಪೋಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ. ಬೈಕ್ ಸವಾರ ಸಾಸ್ತನ ಐರೋಡಿ ನಿವಾಸಿ ರೋಹಿತ್ ರೋಡ್ರಿಗ್ರಸ್ ( 20)
ಎಂದು ತಿಳಿದುಬಂದಿದೆ.
ಕುಮಟಾದಿಂದ ಹೆರೂರು ಕಡೆಗೆ ಹೋಗುತಿದ್ದ ಟೆಂಪೋ ಪಾಂಡೇಶ್ವರ ಸಮೀಪ ಯಾವುದೇ ಹಠಾತ್ ನಿಲ್ಲಿಸಿದ ಪರಿಣಾಮ ಹಿಂದಿನಿಂದ ಬಂದ ಬೈಕ್ ಟೆಂಪೋಗೆ ಢಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ತಕ್ಷಣ ಸ್ಥಳೀಯರು ಆಂಬುಲೆನ್ಸ್ ಗೆ ಕರೆಮಾಡಿ ಗಾಯಾಳುವನ್ನು ಮಣಿಪಾಲ ಆಸ್ಪತ್ರೆ ಸಾಗಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಕೋಟ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Next Story





